ಅಂಜನಪುರದಲ್ಲಿ 20 ಸೆಂ.ಮೀ ಮಳೆ; ಕಾರುಗಳು ಜಲಾವೃತ

7

ಅಂಜನಪುರದಲ್ಲಿ 20 ಸೆಂ.ಮೀ ಮಳೆ; ಕಾರುಗಳು ಜಲಾವೃತ

Published:
Updated:

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಅಂಜನಪುರ ಬಡಾವಣೆಯಲ್ಲಿ ಅಧಿಕ 20 ಸೆಂ.ಮೀ ಮಳೆಯಾಗಿದೆ.

ಭಾನುವಾರ ಬೆಳಿಗ್ಗೆ 8.30 ರಿಂದ ಸೋಮವಾರ ಬೆಳಿಗ್ಗೆ 8.30ರವರೆಗೆ ನಗರದಲ್ಲಿ ಒಟ್ಟು 5.3 ಸೆಂ.ಮೀ ಮಳೆ ಸುರಿದಿದೆ. ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಉಳಿದ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಗೊಟ್ಟಿಗೆರೆಯಲ್ಲಿ 19 ಸೆಂ.ಮೀ ಹಾಗೂ ಉತ್ತರಹಳ್ಳಿಯಲ್ಲಿ 16 ಸೆಂ.ಮೀ ಮಳೆ ದಾಖಲಾಗಿದೆ. 

ಶಿವಗಿರಿ ಅಪಾರ್ಟ್‌ಮೆಂಟ್‌ನ ನೆಲಮಹಡಿಗೆ ನೀರು ನುಗ್ಗಿದ್ದು, ಕಾರು, ಬೈಕ್‌ಗಳು ಸಂಪೂರ್ಣ ಜಲಾವೃತವಾಗಿವೆ.  ಕೋರಮಂಗಲ, ಸಿಲ್ಕ್‌ಬೋರ್ಡ್‌, ಹೊಸಕೆರೆ ಹಳ್ಳಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜೆ.ಪಿ. ನಗರ ಬಳಿಯ ಸೌಪರ್ಣಿಕ ಹಾಗೂ ವೆಗ ಸಿಟಿ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದೆ. ಬನ್ನೇರುಗಟ್ಟ, ಗೊಟ್ಟಿಗೆರೆಯ ರಸ್ತೆಗಳಲ್ಲಿ ಎರಡು ಮೂರು ಅಡಿಗಳವೆರೆಗೆ ನೀರು ನಿಂತಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ.

ಧರೆಗುರುಳಿದ 60 ವರ್ಷದ ಅರಳಿ ಮರ

ಅಗ್ರಹಾರ ದಾಸರಹಳ್ಳಿ ಬಳಿ 60 ವರ್ಷದ ಅರಳಿ ಮರ ಧರೆಗುರುಳಿದೆ. ಇನ್ನೂ ಹೊರವತೃಲ ರಸ್ತೆಯ ನಾಗರಭಾವಿ ಬಳೆ ಗೋಡೆ ಕುಸಿದೆ. ಭಾರಿ ಮಳೆಗೆ ನಗರದ ವಿವಿಧ ಭಾಗಗಳಲ್ಲಿ  ಮರಗಳು ಬಿದ್ದಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದರು.

ತಮಿಳುನಾಡಿನಿಂದ ದಕ್ಷಿಣ ಒಳನಾಡಿನ ಕಡೆಗೆ ಬೀಸುವ ಗಾಳಿಯ ಒತ್ತಡ ಕಡಿಮೆಯಾಗಿದ್ದರಿಂದ (ಟ್ರಫ್‌) ಮಳೆಯಾಗುತ್ತಿದ್ದು, ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇನ್ನೂ ಎರಡು ದಿನಗಳು ಮಳೆಯಾಗಲಿದೆ. ಮೈಸೂರು, ತುಮಕೂರು, ಕೊಡಗು, ಹಾಸನ, ಚಿಕ್ಕಬಳ್ಳಾಪುರದಲ್ಲೂ ಉತ್ತಮ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಉಸ್ತುವರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು.

26ರಿಂದ ರಾಜ್ಯದಾದ್ಯಂತ ಮಳೆ

ಸದ್ಯ ದಕ್ಷಿಣ ಒಳನಾಡಿನಲ್ಲಿ ಸುರಿಯುತ್ತಿರುವ ಮಳೆ 26ರಿಂದ ರಾಜ್ಯಕ್ಕೆ ವ್ಯಾಪಿಸಲಿದೆ. ಕರಾವಳಿ ಸೇರಿ ಹಲವು ಭಾಗಗಳಲ್ಲಿ ಚದುರಿದಂತ ಮಳೆಯಾಗಲಿದೆ. ಕೊಡಗಿನಲ್ಲಿ ಮತ್ತೆ ಭಾರಿ ಪ್ರಮಾಣದ ಮಳೆಯ ಮುನ್ಸೂಚನೆಯಿಲ್ಲ ಎಂದು ವಿವರಿಸಿದರು. 

ಸೋಮವಾರ ರಾಜ್ಯದ ಯಾವ ಭಾಗದಲ್ಲಿ ಎಷ್ಟೆಷ್ಟು ಮಳೆ ಸುರಿದಿದೆ ಎಂಬುದನ್ನು ರಾಜ್ಯ ವಿಪತ್ತು ಉಸ್ತುವರಿ ಕೇಂದ್ರ ನಕ್ಷೆಯ ಮೂಲಕ ಮಾಹಿತಿ ನೀಡಿದೆ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !