ಗಣೇಶ ಮೂರ್ತಿಗಳ ವ್ಯಾಪಾರಿ ಚೇತನ್ ಕುಮಾರ್, ‘ಶನಿವಾರ ರಾತ್ರಿ 1 ಗಂಟೆಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಗಣೇಶ ಮೂರ್ತಿಗೆ ಹಾನಿಯಾಗಿದೆ. ಈ ಮೂರ್ತಿಯನ್ನು ಗ್ರಾಹಕರೊಬ್ಬರು ₹ 75 ಸಾವಿರ ಮುಂಗಡ ನೀಡಿ ಕಾಯ್ದಿರಿಸಿದ್ದರು. ಭಾನುವಾರ ಸಂಜೆ ತೆಗೆದುಕೊಂಡು ಹೋಗುತ್ತಿದ್ದರು. ನಷ್ಟಕ್ಕೆ ಪರಿಹಾರ ಕೊಡಬೇಕು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಹೇಳಿದರು.