ಪರ್ಲ್ಆರ್ಕ್ ಸಿಸ್ಟಮ್ಸ್ ಜತೆಗೆ ಬೆಂಗಳೂರು ವಿ.ವಿ. ಒಪ್ಪಂದ

ಭಾನುವಾರ, ಜೂಲೈ 21, 2019
22 °C

ಪರ್ಲ್ಆರ್ಕ್ ಸಿಸ್ಟಮ್ಸ್ ಜತೆಗೆ ಬೆಂಗಳೂರು ವಿ.ವಿ. ಒಪ್ಪಂದ

Published:
Updated:
Prajavani

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪರ್ಲ್ಆರ್ಕ್ ಸಿಸ್ಟಮ್ಸ್ ನಿಗಮ ನಿಯಮಿತ ತಂತ್ರಜ್ಞಾನ ವಿಷಯದಲ್ಲಿ ಸಹಕಾರಕ್ಕಾಗಿ ಒಪ್ಪಂದ ಮಾಡಿಕೊಂಡಿದೆ.

ವಿಶ್ವವಿದ್ಯಾಲಯದ ಪರವಾಗಿ ಕುಲಸಚಿವ ಪ್ರೊ.ಬಿ.ಕೆ.ರವಿ ಮತ್ತು ಪರ್ಲ್ಆರ್ಕ್ ಪರವಾಗಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ರವೀಶ ಟಿ.ಸಿ ಅವರಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್‌, ವಿಜ್ಞಾನ ನಿಕಾಯದ ಡೀನ್‌  ಪ್ರೊ.ಎಂ.ರಾಮಚಂದ್ರ ಮೋಹನ್, ಎಂಸಿಎ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಲ್. ಮುರಳೀಧರ, ಪರ್ಲ್ಆರ್ಕ್ ಸಿಸ್ಟಮ್ಸ್ ನ ಸಿ.ಎಸ್‌.ಪ್ರಕಾಶ್‌ ಇದ್ದರು.

ಕಂಪನಿಯು ಬೆಂಗಳೂರು ವಿ.ವಿ.ಗೆ ಮುಂದಿನ ಪೀಳಿಗೆಯ ತಂತ್ರಜ್ಞಾನದ ವಿಷಯದಲ್ಲಿ ಮಾಹಿತಿ ಒದಗಿಸಲಿದೆ. ಪರಿಣತಿ ಹೊಂದಿರುವ ಕ್ಷೇತ್ರಗಳಲ್ಲಿ ಕಂಪನಿ ಮತ್ತು ವಿಶ್ವವಿದ್ಯಾಲಯ ಸಂಶೋಧನೆ ಕೈಗೊಳ್ಳಲಿದೆ. ಕಂಪನಿಯು ವಿದ್ಯಾರ್ಥಿಗಳಿಗೆ ಉದ್ಯಮ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ತಂತ್ರಜ್ಞಾನದ ವಿಷಯದಲ್ಲಿ, ತರಬೇತಿ ನೀಡಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !