ಕೆಂಗೇರಿ: ಜ್ಞಾನ ಭಾರತಿ ಅರಣ್ಯ ವಲಯದಲ್ಲಿ ನವಿಲುಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ವಾಯುವಿಹಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

‘ಕೆಲವು ತಿಂಗಳಿಂದ ಬಯೋಪಾರ್ಕ್ ವ್ಯಾಪ್ತಿಯಲ್ಲಿ ನವಿಲುಗಳ ಓಡಾಟ ವಿರಳವಾಗಿದೆ. ಅವುಗಳ ಸಂತತಿ ಕ್ಷೀಣಿಸುತ್ತಿರುವ ಅನುಮಾನ ಮೂಡುತ್ತಿದೆ. ನಾಯಿ ದಾಳಿಗೆ ಸಿಲುಕಿ ನವಿಲುಗಳು ಸತ್ತಿರುವ ಪ್ರಕರಣಗಳೂ ನಡೆದಿವೆ. ಕಳೆದ ಶನಿವಾರ, ನಾಯಿಗಳ ದಾಳಿಗೆ ಗಂಡು ನವಿಲೊಂದು ಅಸು ನೀಗಿತ್ತು. ಯಾವುದೇ ಗಾಯದ ಕುರುಹು ಇಲ್ಲದ ನವಿಲಿನ ಕಳೇಬರ ಕೂಡ ಮಾರ್ಚ್ 16ರಂದು ದೊರಕಿದ್ದು, ಹಲವು ಅನುಮಾನಗಳನ್ನು ಸೃಷ್ಟಿಸಿದೆ’ ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಎಂಜಿನಿಯರ್ ಡಿ.ಕೆ. ಪುಟ್ಟಸ್ವಾಮಿ ಹೇಳಿದರು.

‘ನಗರದ ‘ಆಮ್ಲಜನಕದ ಆಗರ’ ಎಂದೇ ಹೆಸರಾಗಿರುವ ಜ್ಞಾನಭಾರತಿ ಜೈವಿಕ ಉದ್ಯಾನ, ನವಿಲುಗಳ ಆವಾಸ ಸ್ಥಾನವಾಗಿದೆ. ನೂರಾರು ನವಿಲುಗಳು ಈ ಅರಣ್ಯ ವಲಯದಲ್ಲಿ ಕಾಣಸಿಗುತ್ತವೆ. ಒಂದು ಅಂದಾಜಿನ ಪ್ರಕಾರ ಜ್ಞಾನಭಾರತಿ ಆವರಣದಲ್ಲಿ 250ಕ್ಕೂ ಹೆಚ್ಚು ನವಿಲುಗಳಿದ್ದವು. ಅವುಗಳ ಸಮರ್ಪಕ ಆಹಾರ ನಿರ್ವಹಣೆಗಾಗಿ ಪ್ರತಿದಿನ 20 ಕೆ. ಜಿ.ಗೋಧಿ ಹಾಗೂ ನೀರಿನ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ವಾಹನ ಓಡಾಟ ನಿರ್ಬಂಧಿಸಲಾಗಿದೆ. ಆದರೂ ನವಿಲುಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಈ ಬಗ್ಗೆ ವಿಶ್ವವಿದ್ಯಾಲಯ ಹಾಗೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು’ ಎಂದರು.

‘ನಗರ ಪಾಲಿಕೆಗಳು ಶಸ್ತ್ರಚಿಕಿತ್ಸೆ ನಡೆಸಿದ ಕೆಲವು ನಾಯಿಗಳನ್ನು ಇಲ್ಲಿ ಬಿಟ್ಟ ಬಳಿಕ ನವಿಲುಗಳ ಸಂಖ್ಯೆಯೇ ಕಡಿಮೆಯಾಗಿದೆ. ನಾಯಿಗಳು ನವಿಲುಗಳನ್ನು ಕೊಂದು ತಿನ್ನುತ್ತಿವೆ’ ಎಂದು ವಾಯುವಿಹಾರಿ ವೆಂಕಟೇಶ್ ದೂರಿದರು.

ವಿಶ್ವವಿದ್ಯಾಲಯದ ನಿವೃತ್ತ ಉಪನ್ಯಾಸಕ ಪ್ರೊ.ರೇಣುಕಾ ಪ್ರಸಾದ್ ಮಾತನಾಡಿ, ‘ನವಿಲುಗಳ ಸಾವು ಹಾಗೂ ಸಂತತಿ ಇಳಿಕೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಾಯಿಗಳಿಂದ ಕಾಡಿನಲ್ಲಿರುವ ನರಿ, ಕಾಡು ಮೊಲದ ಸಂತತಿಗೂ ಧಕ್ಕೆ ಬರುವ ಸಾಧ್ಯತೆಯಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯ ಆವರಣದಲ್ಲಿ 180ಕ್ಕೂ ಹೆಚ್ಚು ಪಕ್ಷಿ ಸಂಕುಲವಿದೆ. ಸಸ್ಯ ಸಂಕುಲದೊಂದಿಗೆ ಪ್ರಾಣಿ ಪಕ್ಷಿ ಸಂಕುಲದ ರಕ್ಷಣೆಗೂ ಆದ್ಯತೆ ದೊರಕಬೇಕು. ಆಗ ಮಾತ್ರ ಜೀವ ವೈವಿಧ್ಯತೆ ಉಳಿಯಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.