ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನವನ್ನು ಸಂಪತ್ತಾಗಿ ‍ಪರಿವರ್ತಿಸಿ’

Last Updated 3 ಅಕ್ಟೋಬರ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು:ಜ್ಞಾನವನ್ನು ಸಂಪತ್ತಾಗಿಸಬೇಕು, ಆ ಸಂಪತ್ತು ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಗೀತಾ ಬಾಲಿ ಅವರು ಗುರುವಾರ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿ ವಿಜ್ಞಾನ ವಿಭಾಗ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ ಆಯೋಜಿಸಿದ್ದ ವಿಭಾಗದ ರಜತ ಮಹೋತ್ಸವ ಮತ್ತು ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ಪದೇ ಪದೇ ಒಂದೇ ರೀತಿಯ ಜ್ಞಾನವನ್ನು ಪಸರಿಸುವ ಬದಲು ಬಹು ಶಿಸ್ತಿನ ಆಯಾಮದಲ್ಲಿ ನಿಂತು ಹೊಸ ಪ್ರಕಾರದ ಜ್ಞಾನವನ್ನು ಪಸರಿಸಬೇಕಿದೆ’ ಎಂದರು.

ಕುಲಪತಿ ಪ್ರೊ. ಕೆ.ಆರ್‌.ವೇಣುಗೋಪಾಲ್ ಅವರು, ಬ್ರಿಟಿಷರುಸೇರಿದಂತೆ, ಆಳ್ವಿಕೆ ನಡೆಸಿದ ಹಲವು ರಾಜರು ದೇಶದ ಮೇಲೆ ದಾಳಿ ನಡೆಸಿದ್ದೇ ಇಲ್ಲಿನ ವೈವಿದ್ಯ ಸಂಪತ್ತಿಗಾಗಿ’ ಎಂದರು.

‘ದೇಶದಲ್ಲಿ ಉತ್ಪಾದನಾ ಸಮತೋಲನದ ಅಗತ್ಯವಿದೆ’ ಎಂದು ಕುಲಪತಿ ಪ್ರತಿಪಾದಿಸಿದರು.

ವಿಶ್ರಾಂತ ಕುಲಪತಿಪ್ರೊ. ನಿರಂಜನ್ ಮಾತನಾಡಿದರು. ಹಿರಿಯ ಸಂಶೋಧಕ ಡಾ. ಅಯ್ಯಪ್ಪ, ಹಿರಿಯ ಪ್ರಾಧ್ಯಾಪಕರಾದಪ್ರೊ. ಸುಳ್ಯಾ, ಪ್ರೊ.ಮಂಜುನಾಥ್, ಪ್ರೊ. ಮಂಜುಳಾಕುಮಾರಿ, ಪ್ರೊ.ಸಿ. ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT