ಶನಿವಾರ, ಜುಲೈ 24, 2021
25 °C
ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪಡೆದ ಪಶುವೈದ್ಯರ ಪ್ರತಿಪಾದನೆ

‘ಹೆಚ್ಚುವರಿ ಭತ್ಯೆ ಸೂಕ್ತ ನಿರ್ಧಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಪಡೆದ ಪಶುವೈದ್ಯರಿಗೆ ಹೆಚ್ಚುವರಿ ಭತ್ಯೆ ನೀಡುವ ಇಲಾಖೆ ನಿರ್ಧಾರ ಸೂಕ್ತವಾಗಿದೆ’ ಎಂದು ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಪದವೀಧರ ಪಶುವೈದ್ಯರು ಪ್ರತಿಪಾದಿಸಿದ್ದಾರೆ.

‘ಜಾನುವಾರುಗಳ ಜೀವ ರಕ್ಷಣೆಗೆ ಹೆಚ್ಚುವರಿ ಸೇವೆ ನೀಡಬೇಕೆಂಬ ಹಂಬಲದಿಂದ 800ಕ್ಕೂ ಹೆಚ್ಚು ಮಂದಿ ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸಕ ಯಾವುದೋ ಒಂದು ಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಅಗತ್ಯ ಬಿದ್ದಾಗ ಇಡೀ ತಾಲ್ಲೂಕಿನಲ್ಲೇ ಓಡಾಡಿ ಸೇವೆ ಒದಗಿಸುತ್ತಾರೆ’ ಎಂದು ಪಶುವೈದ್ಯರ ಸಂಘದ ನಿಕಟಪೂರ್ವ ಅಧ್ಯಕ್ಷ ಶಿವಶರಣಪ್ಪ ಯಲಗೋಡ, ಸ್ನಾತಕೋತ್ತರ ಪದವೀಧರರ ಸಂಘದ ಅಧ್ಯಕ್ಷ ಟಿ.ಎಸ್. ಶ್ರೀಧರಮೂರ್ತಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು