ಶನಿವಾರ, ನವೆಂಬರ್ 16, 2019
22 °C

ದೂರು ನೀಡಲು ಬಂದು ಸಿಕ್ಕಿಬಿದ್ದ ಬಾಂಗ್ಲಾ ನಿವಾಸಿ!

Published:
Updated:

ಬೆಂಗಳೂರು: ‘ಸ್ನೇಹಿತ ಕಿರುಕುಳ ನೀಡುತ್ತಿದ್ದಾನೆ’ ಎಂದು ಆರೋಪಿಸಿ ದೂರು ನೀಡಲು ಬಂದ ಬಾಂಗ್ಲಾದ ಯುವತಿಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದ ನೂಪುರ್ (23) ಬಂಧಿತ ಯುವತಿ. ವಿಚಾರಣೆ ನಡೆಸಿದಾಗ, ಆಕೆಯ ಬಳಿ ವೀಸಾ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣ ಆಕೆಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮಲ್ಲತ್ತಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ನೂಪುರ್ ನೆಲೆಸಿದ್ದಳು. ನ. 1ರಂದು ಮಧ್ಯಾಹ್ನ 1 ಗಂಟೆಗೆ ಠಾಣೆಗೆ ಬಂದಿದ್ದ ಆಕೆ, ‘ಸ್ನೇಹಿತ ಸಾದಿಕ್ ಕುರ್ ರೆಹಮಾನ್ ಎಂಬಾತ ಮನೆಗೆ ಬಂದು, ಬಾಗಿಲು ಬಡಿದು ಕಿರುಕುಳ ನೀಡುತ್ತಿದ್ದಾನೆ. ಆತನ ವಿರುದ್ಧ ಕ್ರಮ ತೆಗೆದುಕೊಂಡು, ನನಗೆ ರಕ್ಷಣೆ ನೀಡಿ’ ಎಂದು ಯುವತಿ ದೂರು ಕೊಟ್ಟಿದ್ದಳು.

ಪ್ರತಿಕ್ರಿಯಿಸಿ (+)