ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2025 ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ’ಗೆ ಬಂಜಾರ ಸಮುದಾಯದ ಸಮಾಜ ಸೇವಕ ರೂಪ್ಲಾ ನಾಯಕ್ ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ಮೋತಿಲಾಲ ರೂ. ಚವ್ಹಾಣ ಅವರು ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದಾರೆ. ‘ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ’ಯು ಅಕಾಡೆಮಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇದು ₹ 1 ಲಕ್ಷ ನಗದು ಒಳಗೊಂಡಿದೆ. ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಶತಾಯುಷಿ ರೂಪ್ಲಾ ನಾಯಕ್ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಅವರು ಬಂಜಾರ ಸಮುದಾಯದ ಮೊಟ್ಟ ಮೊದಲ ಸಿವಿಲ್ ಎಂಜಿನಿಯರ್ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು. ಸೂರಗೊಂಡನಕೊಪ್ಪ ನಿರ್ಮಾಣ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಿದ್ದರು.

ಅಕಾಡೆಮಿಯ ಗೌರವ ಪ್ರಶಸ್ತಿಗೆ ಜನಪದ ಸಾಹಿತ್ಯ ಹಾಗೂ ಸಂಶೋಧನೆ ಕ್ಷೇತ್ರದಿಂದ ಧಾರವಾಡದ ಹರಿಲಾಲ್ ಪವಾರ್, ನಗಾರಿ ವಾದ್ಯ ಕ್ಷೇತ್ರದಿಂದ ವಿಜಯಪುರದ ಶಂಕರ್ ಪುನ್ನು ಜಾಧವ್, ಬಂಜಾರ ನಗಾರಿ, ಗೀತೆಗಳು ಕ್ಷೇತ್ರದಿಂದ ಗದಗದ ಪಾಂಡಪ್ಪ ದೇವಲಪ್ಪ ಲಮಾಣಿ, ಸಮಾಜಸೇವೆ ಕ್ಷೇತ್ರದಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮಚಂದ್ರ ನಾಯಕ್ ಹಾಗೂ ನೃತ್ಯ ಕ್ಷೇತ್ರದಿಂದ ಧಾರವಾಡದ ಗೌರವ್ವಾ ಶಿವಪ್ಪಾ ಲಮಾಣಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.

ವಾರ್ಷಿಕ ಪ್ರಶಸ್ತಿಗೆ ಬಂಜಾರ ಭಜನೆ ಹಾಗೂ ಸಾಹಿತ್ಯ ಕ್ಷೇತ್ರದಿಂದ ವಿಜಯಪುರದ ವಸಂತ ಎಲ್. ಚವ್ಹಾಣ, ಲಂಬಾಣಿ ನೃತ್ಯ ಕ್ಷೇತ್ರದಿಂದ ದಾವಣಗೆರೆಯ ದೇವಿಬಾಯಿ, ವೈದ್ಯಕೀಯ ಕ್ಷೇತ್ರದಿಂದ ಬೆಂಗಳೂರಿನ ಡಾ. ರಾಕೇಶ್ ನಾಯ್ಕ್ ಎಲ್., ತಟ್ಟೆ ವಾದ್ಯ ಕ್ಷೇತ್ರದಿಂದ ಚಾಮರಾಜನಗರದ ಗೋವಿಂದ ನಾಯ್ಕ್, ಸಂಗೀತ ಕ್ಷೇತ್ರದಿಂದ ಹೊಸಪೇಟೆಯ ಶ್ರೀನಿವಾಸ್ ನಾಯ್ಕ್, ಕ್ರೀಡಾ ಕ್ಷೇತ್ರದಿಂದ ಬೆಂಗಳೂರಿನ ಶೇಖರ್ ನಾಯ್ಕ್ ಎಲ್., ಜಾನಪದ ಹಾಡುಗಾರಿಕೆ ಕ್ಷೇತ್ರದಿಂದ ದಾವಣಗೆರೆಯ ಶಾಂತಾನಾಯಕ್, ಜಾನಪದ ಸಂಗೀತ ಕ್ಷೇತ್ರದಿಂದ ರಾಯಚೂರಿನ ಪಾಂಡುರಂಗ (ಸುದೀಪ್), ಬಂಜಾರ ಭಜನೆ ಕ್ಷೇತ್ರದಿಂದ ಕಲಬುರಗಿಯ ಚಂದ್ರಶೇಖರ ಯಶ್ವತ ರಾಠೋಡ ಹಾಗೂ ಬಂಜಾರ ನೃತ್ಯ ಕ್ಷೇತ್ರದಿಂದ ಬೀದರ್ನ ವಿಜಯಲಕ್ಷ್ಮಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ.

ಅಕಾಡೆಮಿಯು ಇದೇ 27ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಾರಂಭ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರೂಪ್ಲಾ ನಾಯಕ್ಗೆ ಪ್ರಶಸ್ತಿ ಪ್ರದಾನ

ಅಕಾಡೆಮಿಯ ‘ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ’ಯನ್ನು ಕೆಲ ದಿನಗಳ ಹಿಂದೆಯೇ ರೂಪ್ಲಾ ನಾಯಕ್ ಅವರಿಗೆ ಪ್ರದಾನ ಮಾಡಲಾಗಿದೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದ ಕಾರಣ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಅಕಾಡೆಮಿ ಅಧ್ಯಕ್ಷರಾದ ಮೋತಿಲಾಲ ಚವ್ಹಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಪ್ರಶಸ್ತಿ ಪ್ರದಾನ ಮಾಡಿದ್ದರು. ‘ಬಂಜಾರ ಸಮುದಾಯಕ್ಕೆ ರೂಪ್ಲಾ ನಾಯಕ್ ಮಹತ್ವದ ಕೊಡುಗೆ ನೀಡಿದ್ದಾರೆ. ಆದ್ದರಿಂದ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಬೇಕೆನ್ನುವಷ್ಟರಲ್ಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿರುವ ಬಗ್ಗೆ ಕುಟುಂಬಸ್ಥರು ತಿಳಿಸಿದರು. ಹಾಗಾಗಿ ಅವರ ಮನೆಗೆ ಹೋಗಿ ಪ್ರಶಸ್ತಿ ವಿತರಿಸಿದೆವು’ ಎಂದು ಮೋತಿಲಾಲ ಚವ್ಹಾಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.