ಬನ್ನೇರುಘಟ್ಟ(ಆನೇಕಲ್): ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇಂಡಿಯಾ ಪೋಸ್ಟ್, ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ ಮತ್ತು ಪೋಸ್ಟ್ ಕಾರ್ಡ್ ವಿಲ್ಲೆ ಸಹಯೋಗದಲ್ಲಿ ವಿಶ್ವ ಆಮೆ ದಿನಾಚರಣೆ ಶನಿವಾರ ನಡೆಯಿತು.

ನೆಲದ ಆಮೆ, ಕಡಲಾಮೆ ಮತ್ತು ಸಿಹಿ ನೀರಿನ ಆಮೆಗಳನ್ನು ಒಳಗೊಂಡ ಒಂಭತ್ತು ಅಂಚೆ ಲಕೋಟೆಯನ್ನು ಬನ್ನೇರುಘಟ್ಟ ಉದ್ಯಾನದಲ್ಲಿ ಬಿಡುಗಡೆ ಮಾಡಲಾಯಿತು. ಆಮೆಗಳ ಜಾತಿಗಳ ನಡುವಿನ ವ್ಯತ್ಯಾಸ ಬಗ್ಗೆ ಮಾಹಿತಿ ನಿಡಲಾಯಿತು.

ಆಮೆ ಸಂರಕ್ಷಣೆ ಪ್ರಯತ್ನಗಳಿಗೆ ಕೊಡುಗೆ ನೀಡಬಹುದಾದ ಮಾರ್ಗದ ಬಗ್ಗೆ ಪ್ರೇಕ್ಷಕರಿಗೆ ಕಿರು ಸಂರಕ್ಷಣಾ ಚಲನಚಿತ್ರ ಪ್ರದರ್ಶಿಸಲಾಯಿತು. ಕಡಲಾಮೆಗಳ ಮಾದರಿಗಳನ್ನು ಉದ್ಯಾನದಲ್ಲಿ ಪ್ರದರ್ಶಿಸಿದ್ದು ಪ್ರೇಕ್ಷಕರ ಗಮನ ಸೆಳೆಯಿತು. ಪ್ರವಾಸಿಗರಿಗೆ ಆಮೆ ಪ್ರಬೇಧಗಳು, ಪರಿಸರ ವ್ಯವಸ್ಥೆಯಲ್ಲಿಅವುಗಳ ಪ್ರಮುಖ ಪಾತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು.

ಬೆಂಗಳೂರು ಅಂಚೆ ಇಲಾಖೆಯ ದಿನೇಶ್ ನಾರಾಯಣ್, ನಳಿನಿ, ಬನ್ನೇರುಘಟ್ಟ ಜೈವಿಕ ಉದ್ಯಾನದ ಉಪ ನಿರ್ದೇಶಕಿ ಅನುಷಾ, ಡಾ.ಪ್ರಯಾಗ್, ವಲಯ ಅರಣ್ಯ ಅಧಿಕಾರಿ ಆನಂದ್ ಮದನೆ, ಉಪ ವಲಯ ಅರಣ್ಯ ಅಧಿಕಾರಿ ಅರ್ಪಿತಾ, ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.