ಸೋಮವಾರ, ನವೆಂಬರ್ 18, 2019
25 °C
ಬಸವಧರ್ಮ ಪೀಠದ ಕಲ್ಯಾಣ ಪರ್ವ ಕಾರ್ಯಕ್ರಮ

ಮೆರವಣಿಗೆಗೆ ಚಪ್ಪಲಿ ಪ್ರದರ್ಶನ

Published:
Updated:
Prajavani

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಬಸವಧರ್ಮ ಪೀಠದಿಂದ ಹಮ್ಮಿಕೊಂಡಿದ್ದ 18ನೇ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮೆರವಣಿಗೆಗೆ ಕೆಲವರು ಚಪ್ಪಲಿ ಪ್ರದರ್ಶಿಸಿದರು.

‘ಮಾತೆ ಮಹಾದೇವಿಯವರು ಬಸವಣ್ಣನವರ ವಚನ ತಿರುಚಿದ ಪುಸ್ತಕಗಳನ್ನು ಈ ಕಲ್ಯಾಣ ಪರ್ವದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಬಸವೇಶ್ವರ ದೇವಸ್ಥಾನ ಸಮಿತಿಯವರು ಮೆರವಣಿಗೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವರು ಚಪ್ಪಲಿ ಪ್ರದರ್ಶಿಸಿದರು.

‘ಕಲ್ಯಾಣ ಪರ್ವದ ಮೆರವಣಿಗೆಯಲ್ಲಿ ಬಸವಣ್ಣ ಹಾಗೂ ಇತರೆ ಶರಣರ ಭಾವಚಿತ್ರ ಹೊತ್ತ ಸಮಾಜದವರು, ವೇಷಧಾರಿಗಳು, ಸ್ವಾಮೀಜಿ ಪಾಲ್ಗೊಂಡಿದ್ದರು. ಈ ವೇಳೆ ಬಸವೇಶ್ವರ ದೇವಸ್ಥಾನ ಸಮಿತಿಯವರು ಚಪ್ಪಲಿ ಪ್ರದರ್ಶಿಸಿ ಅವಮಾನ ಮಾಡಿದ್ದಾರೆ’ ಎಂದು ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ದೂರಿದರು.

‘ಮಾತೆ ಮಹಾದೇವಿಯವರು ಬಸವಣ್ಣನವರ ವಚನ ತಿರುಚಿದ ವಿವಾದ ಮುಗಿದ ಅಧ್ಯಾಯ. ಈ ವಿವಾದ ಮುಂದಿ
ರಿಸಿಕೊಂಡು ಪ್ರತಿಭಟನೆ ನಡೆಸಿ, ಚಪ್ಪಲಿ ಪ್ರದರ್ಶಿಸಿದ್ದು ಸರಿಯಲ್ಲ. ಅವರು ಈ ಕೂಡಲೇ ಬಹಿರಂಗ ಕ್ಷಮೆ ಕೇಳ
ಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರವಾಗಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬಸವಕಲ್ಯಾಣದಲ್ಲಿನ ನೂತನ ಅನುಭವ ಮಂಟಪಕ್ಕೆ ಕೇಂದ್ರ ಸರ್ಕಾರ ₹1000 ಕೋಟಿ ಒದಗಿಸಬೇಕು. ಲಿಂಗಾಯತ ಧರ್ಮ ಮಾನ್ಯತೆಗೆ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸು ಮಾಡಿದ್ದು ಕೇಂದ್ರ ಸರ್ಕಾರ ಮಾನ್ಯ ಮಾಡಬೇಕು. ಬಸವ ಕಲ್ಯಾಣದಿಂದ ರೈಲು ಆರಂಭಿಸಬೇಕು ಎಂಬುದು ಸೇರಿದಂತೆ ಆರು ನಿರ್ಣಯಗಳನ್ನು ಕಲ್ಯಾಣ ಪರ್ವದ ಸಮಾರೋಪ ಸಮಾರಂಭದಲ್ಲಿ ಅಂಗೀಕರಿಸಲಾಯಿತು.

ಪ್ರತಿಕ್ರಿಯಿಸಿ (+)