ಮೇಯರ್‌ ಭೇಟಿ ಮಾಡಿದ ಚೀನಾ ನಿಯೋಗ

7

ಮೇಯರ್‌ ಭೇಟಿ ಮಾಡಿದ ಚೀನಾ ನಿಯೋಗ

Published:
Updated:
ಬಿಬಿಎಂಪಿಗೆ ಶುಕ್ರವಾರ ಚೀನಾದಿಂದ ಆಗಮಿಸಿದ ಚೆಂಗ್ಡೂ ಮುನಿಸಿಪಲ್‌ ಕಾರ್ಪೊರೇಷನ್‌ನ ಪ್ರತಿನಿಧಿಗಳನ್ನು ಮೇಯರ್‌ ಆರ್‌.ಸಂಪತ್‌ರಾಜ್‌ ಅಭಿನಂದಿಸಿದರು. ಪದ್ಮನಾಭ ರೆಡ್ಡಿ, ಆಯುಕ್ತ ಮಂಜುನಾಥ ಪ್ರಸಾದ್‌ ಇದ್ದರು    –ಪ್ರಜಾವಾಣಿ ಚಿತ್ರ

ಬೆಂಗಳೂರು: ಇಂಡಿಯಾ – ಚೀನಾ ಸ್ನೇಹ ಸಂಘಟನೆಯ ಪ್ರತಿನಿಧಿಗಳು ಶುಕ್ರವಾರ ಮೇಯರ್‌ ಆರ್‌.ಸಂಪತ್‌ರಾಜ್‌ ಅವರನ್ನು ಭೇಟಿ ಮಾಡಿ, ಚೀನಾಕ್ಕೆ ಆಹ್ವಾನಿಸಿದರು.

ಭೇಟಿ ಬಳಿಕ ಮಾತುಕತೆಯ ವಿವರ ನೀಡಿದ ಮೇಯರ್‌, ‘ಚೀನಾದ ಚೆಂಗ್ಡೋ ಮುನ್ಸಿಪಲ್‌ ಕಾರ್ಪೊರೇಷನ್‌ನ ಪ್ರತಿನಿಧಿಗಳು ಆಹ್ವಾನ ನೀಡಿದ್ದಾರೆ. ಅಲ್ಲಿನ ವ್ಯವಸ್ಥೆ, ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡುವುದನ್ನು ನೋಡಬಹುದು. ಮುಂದೆ ಅಧಿಕೃತ ಆಹ್ವಾನ ಬಂದಾಗ ನಾನು, ಉಪಮೇಯರ್‌, ಉಪಮುಖ್ಯಮಂತ್ರಿ, ಆಯುಕ್ತರು ಮತ್ತು ಅಧಿಕಾರಿಗಳು ಅಲ್ಲಿಗೆ ಭೇಟಿಕೊಟ್ಟು ಅಧ್ಯಯನ ನಡೆಸುತ್ತೇವೆ. ಖಾಸಗಿ ಸಹಭಾಗಿತ್ವದಲ್ಲಿ ರೂಪಿಸಲಾದ ಹಲವು ಯೋಜನೆಗಳನ್ನು ಅವರು ನಮಗೆ ಹೇಳಿದ್ದಾರೆ. ಸಭೆಯ ಬಳಿಕ ಆ ಬಗ್ಗೆ ವಿವರವಾಗಿ ಪರಿಶೀಲಿಸುತ್ತೇನೆ’ ಎಂದು ಹೇಳಿದರು. 

ಬಿಬಿಎಂಪಿ ವಿಕೇಂದ್ರೀಕರಣದ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್‌, ‘ಈ ಪ್ರಸ್ತಾವದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ನಗರದ ಹಿತದೃಷ್ಟಿಯಿಂದ ವಿಕೇಂದ್ರೀಕರಣ ಒಳ್ಳೆಯದು’ ಎಂದು ಹೇಳಿದರು.

ಚೆಂಗ್ಡೂ ಮುನ್ಸಿಪಲ್‌ ಕೌನ್ಸಿಲ್‌ನ ಕಾರ್ಯದರ್ಶಿ ಯಾಂಗ್‌ ಡೊಂಗ್‌ಷೆಂಗ್‌, ಕಚೇರಿ ನಿರ್ದೇಶಕ ಹುವಾಂಗ್‌ ಕ್ಸಿಯೋಚೆಂಗ್‌, ನಿರ್ದೇಶಕ ಹುವಾಂಗ್‌ ಜಿನ್‌ಲಾಂಗ್‌, ಉಪ ನಿರ್ದೇಶಕರಾದ ಜಿಂಗ್‌ಶೋ, ಝಾಂಗ್‌ ಜಿನ್‌ ನಿಯೋಗದಲ್ಲಿದ್ದರು. 

 ಅಧಿಕಾರ ಸ್ವೀಕಾರ:  ಬಿಬಿಎಂಪಿ ಆಯುಕ್ತರಾಗಿ ಎನ್‌. ಮಂಜುನಾಥ್‌ ಪ್ರಸಾದ್‌ ಶುಕ್ರವಾರ ಅಧಿಕಾರ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದಿಂದ ಗುರುವಾರ ಆದೇಶ ಬಂದಿದೆ. ಎರಡನೇ ಬಾರಿಗೆ ಆಯುಕ್ತನಾಗಿವುದು ಸಂತಸ ತಂದಿದೆ. ಬಿಬಿಎಂಪಿಯಲ್ಲಿ ಇನ್ನೂ ಹಲವು ಕೆಲಸಗಳು ಆಗಬೇಕಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕಿದೆ. ಕಸ, ರಸ್ತೆ ಗುಂಡಿ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !