ಸೋಮವಾರ, ನವೆಂಬರ್ 18, 2019
23 °C

ಪಾದಚಾರಿ ಮಾರ್ಗ ಒತ್ತುವರಿ ತೆರವು

Published:
Updated:
Prajavani

ಬೆಂಗಳೂರು: ಯಲಹಂಕ ಮತ್ತು ಮಹದೇವಪುರ ವಲಯಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.

ಹೂಡಿ ಉಪವಿಭಾಗದ ಕುಂದಲಹಳ್ಳಿ ಕಾಲೊನಿಯ ಐಟಿಪಿಎಲ್ ಮುಖ್ಯರಸ್ತೆ ಮತ್ತು ‌ಬ್ಯಾಟರಾಯನಪುರ ವಿಭಾಗ ಸೇರಿ ಒಟ್ಟು 18 ಶಾಶ್ವತ ಮತ್ತು 25 ತಾತ್ಕಾಲಿಕ ಒತ್ತುವರಿಗಳನ್ನು ತೆರವುಗೊಳಿಸಲಾಯಿತು. ಒತ್ತುವರಿ ಮುಂದುವರಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಎಂಜಿನಿಯರ್ ಆರ್.ಎಲ್. ಪರಮೇಶ್ವರಯ್ಯ ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)