ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP budget 2023 | ಇಂದು ಬಿಬಿಎಂಪಿ ಬಜೆಟ್‌

Last Updated 1 ಮಾರ್ಚ್ 2023, 20:37 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 2023–24ನೇ ಸಾಲಿನ ಬಜೆಟ್‌ ಅನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಗುರುವಾರ ಮಂಡಿಸಲಿದ್ದಾರೆ.

ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (ಟೌನ್‌ಹಾಲ್‌) ಬೆಳಿಗ್ಗೆ 11 ಗಂಟೆಗೆ ಬಜೆಟ್‌ ಮಂಡನೆಯಾಗಲಿದೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌
ಉಪಸ್ಥಿತರಿರಲಿದ್ದಾರೆ.

ಬಜೆಟ್‌ ಪೂರ್ವ ಸಭೆಗಳಲ್ಲಿ ಭಾಗವಹಿಸಿದ್ದ ಎನ್‌ಜಿಒ, ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಹಾಜರಿರಲಿದ್ದಾರೆ. ಪಾಲಿಕೆಯ ವೆಬ್‌ಸೈಟ್ https://bbmp.gov.in, ಮುಖ್ಯ ಆಯುಕ್ತರ ಫೇಸ್‌ಬುಕ್, ಟ್ವಿಟ್ಟರ್ ಪೇಜ್ ಹಾಗೂ ಯೂಟ್ಯೂಬ್ https://www.youtube.com/watch?v=HyYKHmwOU6s ಮೂಲಕ ಬಜೆಟ್‌ ನೇರ ಪ್ರಸಾರವಾಗಲಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಸಿ.ಎಂ ಸೂಚನೆ:‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊನೆಯ ಕ್ಷಣದಲ್ಲಿ ಬಜೆಟ್‌ನಲ್ಲಿ ಬದಲಾವಣೆ ಸೂಚಿಸಿದರು. ಬಜೆಟ್‌ಗೆ ಸಮ್ಮತಿ ಪಡೆಯಲು ಬುಧವಾರ ಬೆಳಿಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತೆರಳಿದ್ದರು. ಈ ಸಂದರ್ಭದಲ್ಲಿ ಮುಖ್ಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಯವರು ಕೆಲವು ಬದಲಾವಣೆ ಹಾಗೂ ಯೋಜನೆಗಳನ್ನು ಸೇರಿಸಲು ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.

2022–23ನೇ ಸಾಲಿನ ಬಜೆಟ್‌ ಅನ್ನು ಕಳೆದ ವರ್ಷ ಮಾರ್ಚ್‌ 31ರಂದು ರಾತ್ರಿ 11.30ಕ್ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ‘ಗುಪ್ತ’ವಾಗಿ ಬಜೆಟ್‌ ಮಂಡಿಸಲಾಗಿತ್ತು. ಈ ಬಾರಿ ಮಾರ್ಚ್‌ ಮೊದಲ ವಾರದಲ್ಲಿ ಮುಕ್ತವಾಗಿ ಬಜೆಟ್‌
ಮಂಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT