ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ಪಂಚಾಯಿತಿಯ ಇ–ಖಾತಾ ಹೊಂದಿದ್ದವರಿಗೆ ಬಿಬಿಎಂಪಿ ಇ–ಖಾತಾ

Published : 13 ಸೆಪ್ಟೆಂಬರ್ 2024, 21:11 IST
Last Updated : 13 ಸೆಪ್ಟೆಂಬರ್ 2024, 21:11 IST
ಫಾಲೋ ಮಾಡಿ
Comments

ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್‌ ವ್ಯಾಪ್ತಿಯಲ್ಲಿ ಈ ಹಿಂದೆ ಗ್ರಾಮ ಪಂಚಾಯಿತಿಯ ಇ–ಖಾತಾ ಹೊಂದಿದವರು ಬಿಬಿಎಂಪಿಯಿಂದ ಇ–ಖಾತಾವನ್ನು ಪಡೆಯಬಹುದು.

‘ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಇ-ಸ್ವತ್ತು ತಂತ್ರಾಂಶದಿಂದ ಹಳೆಯ ಗ್ರಾಮ ಪಂಚಾಯಿತಿಯ ಇ-ಖಾತಾ ಹೊಂದಿದ್ದ ಆಸ್ತಿಗಳಿಗೆ ಸ್ವಯಂಚಾಲಿತವಾಗಿ ಬಿಬಿಎಂಪಿಯಿಂದ ಇ–ಖಾತಾ ಸೃಷ್ಟಿಯಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ಗ್ರಾಮ ಪಂಚಾಯಿತಿಯನ್ನು ಬಿಬಿಎಂಪಿಯಲ್ಲಿ ವಿಲೀನಗೊಳಿಸುವ ಮೊದಲು ಪಂಚಾಯಿತಿಯಿಂದ ಇ-ಖಾತಾ ಹೊಂದಿದ್ದ ಮಲ್ಲಸಂದ್ರ ಮತ್ತು ಕಾವಲ್ ಗ್ರಾಮಗಳಲ್ಲಿನ ಸುಮಾರು 2,500 ಸ್ವತ್ತುಗಳಿಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಅರ್ಜಿ ಸಂಖ್ಯೆಗಳು ಮತ್ತು ಬಿಬಿಎಂಪಿ ಇ-ಖಾತಾಗಳನ್ನು ರಚಿಸಲಾಗಿದೆ.

ಈ ಆಸ್ತಿಗಳ ಮಾಲೀಕರು, ಪಂಚಾಯಿತಿಯಿಂದ ನೀಡಿರುವ ಇ-ಸ್ವತ್ತು (ಇ-ಖಾತಾ) ಸಂಖ್ಯೆ ಹಾಗೂ ಸ್ವಯಂಘೋಷಿತ ಆಸ್ತಿ ತೆರಿಗೆಯ ಅರ್ಜಿ ಸಂಖ್ಯೆ ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಬಹುದು ಎಂದು ಮಾಹಿತಿ ನೀಡಿದರು. ಆಸ್ತಿ ತೆರಿಗೆ ಪಾವತಿಸಿದ ನಂತರ ಬಿಬಿಎಂಪಿಯಿಂದ ಇ-ಖಾತಾ ಪಡೆಯಬಹುದಾಗಿರುತ್ತದೆ. ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್‌) ಅಡಿಯಲ್ಲಿ ಸಂಪೂರ್ಣ ಬಡ್ಡಿ ಮನ್ನಾ ಆಗಲಿದೆ. ಬಿಬಿಎಂಪಿ ಪಟ್ಟಿಯಲ್ಲಿ ಸ್ವತ್ತುಗಳು ಇಲ್ಲದಿದ್ದರೆ ಅವರು ಇ-ಖಾತಾಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಇ-ಖಾತಾ ನೀಡಲಾಗುವುದು ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT