ಬೆಂಗಳೂರು: ಫೇಸ್‌ಲೆಸ್, ಸಂಪರ್ಕ ರಹಿತ ಹಾಗೂ ಆನ್‌ಲೈನ್ ಮೂಲಕ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಅಕ್ಟೋಬರ್ 1ರಿಂದ ಆರಂಭಿಸಲಾಗುತ್ತಿದೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಿರ್ದೇಶನದಲ್ಲಿ ಇ–ಖಾತಾ ವ್ಯವಸ್ಥೆಯನ್ನು ಪ್ರಾರಂಭಿ ಸಲಾಗುತ್ತಿದೆ. ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರ ದಲ್ಲಿ ಕರಡು ಇ-ಖಾತಾವನ್ನು ಆನ್‌ಲೈನ್ www.bbmpeaasthi.karnataka.gov.inನಲ್ಲಿ ರಚಿಸಿ, ಇರಿಸಲಾಗಿದೆ.ನಾಗರಿಕರು ತಮ್ಮ ಸ್ವತ್ತಿನ ಕರಡು ಇ-ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಅಂತಿಮ ಇ-ಖಾತಾವನ್ನು ಪಡೆಯಲು ಆಧಾರ್ ಇ-ಕೆವೈಸಿ, ಸ್ವತ್ತಿನ ಜಿಪಿಎಸ್ ದತ್ತಾಂಶ, ಛಾಯಾಚಿತ್ರ, ಸ್ವತ್ತಿನ ನೋಂದಾಯಿತ ದಸ್ತಾವೇಜು, 2004ರ ಏಪ್ರಿಲ್ 1ರಿಂದ ಈವರೆಗಿನ ಋಣಭಾರ ಪ್ರಮಾಣಪತ್ರ (ಇ.ಸಿ), ಬೆಸ್ಕಾಂ ಮೀಟರ್ ಸಂಖ್ಯೆ, ಎ-ಖಾತಾ ಎಂದು ದೃಢೀಕರಿಸುವ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.