ಶನಿವಾರ, ಡಿಸೆಂಬರ್ 14, 2019
25 °C

ಬಿಬಿಎಂಪಿ: ಸ್ಥಾಯಿ ಸಮಿತಿಯ ಚುನಾವಣಾ ಸ್ಥಳ ದಿಡೀರ್ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ 12 ಸ್ಥಾಯಿ ಸಮಿತಿಗಳ ಚುನಾವಣೆ ನಡೆಯುವ ಸ್ಥಳವನ್ನು ದಿಡೀರ್ ಬದಲಾವಣೆ ಮಾಡಲಾಗಿದೆ. 
ಇದೇ 4ರಂದು ಪುರಭವನದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ತಿಳಿಸಿದ್ದಾರೆ. 

ಈ ಮೊದಲು ಬಿಬಿಎಂಪಿಯ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಂಭಾಗಣದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು. 
ಇದೇ 4 ರಂದು ಬೆಳ್ಳಗೆ 8ರಿಂದ 9.30 ರವರೆಗೂ ನಾಮಪತ್ರವನ್ನು ಸ್ವೀಕರಿಸಲಾಗುವುದು ಎಂದುಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ. ಇದಕ್ಕೆ ಕಾರಣ ತಿಳಿಸಿಲ್ಲ. 

ಪಾಲಿಕೆ ವ್ಯಾಪ್ತಿಯ 4 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಬೇಕು ಎಂದು ಬಿಜೆಪಿ ಶಾಸಕ ವಿಶ್ವನಾಥ್ ಒತ್ತಾಯಿಸಿದ್ದರು. ಇದಕ್ಕೆ ಚುನಾವಣಾಧಿಕಾರಿ ಸಮ್ಮತಿಸಿಲ್ಲ.

ಪ್ರತಿಕ್ರಿಯಿಸಿ (+)