ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪುರ: 50 ಬೀದಿ ವ್ಯಾಪಾರ ಮಳಿಗೆ ತೆರವು ಮಾಡಿದ ಬಿಬಿಎಂಪಿ 

Last Updated 26 ಆಗಸ್ಟ್ 2019, 10:36 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರದಲ್ಲಿನ ಹೊರ ವರ್ತುಲ ರಸ್ತೆ ಮತ್ತು ಮಾರತ್ತಹಳ್ಳಿ ಪಾದಚಾರಿ ಮಾರ್ಗದಲ್ಲಿರುವ50 ವ್ಯಾಪಾರ ಮಳಿಗೆಗಳನ್ನುಬಿಬಿಎಂಪಿ ತೆರವು ಮಾಡಿದೆ.

ಕಳೆದ ಒಂದು ವಾರದಲ್ಲಿ ಪಾದಚಾರಿ ರಸ್ತೆಯಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡಿದ್ದ 50ವ್ಯಾಪಾರ ಮಳಿಗೆಗಳನ್ನು ಬಿಬಿಎಂಪಿ ತೆರವು ಮಾಡಿದೆ.

ಕಳೆದ ವರ್ಷವೂ ಬಿಬಿಎಂಪಿ ಇದೇ ರೀತಿ ಮಹದೇವಪುರದಲ್ಲಿ ವ್ಯಾಪಾರ ಮಳಿಗೆಗಳನ್ನು ತೆರವು ಮಾಡಿತ್ತು. ಸಮಸ್ಯೆ ಏನೆಂದರೆ ತೆರವು ಕಾರ್ಯಾಚರಣೆ ಮಾಡಿ ಎರಡು ಮೂರು ದಿನಗಳ ನಂತರ ಬೀದಿ ವ್ಯಾಪಾರಿಗಳು ಮತ್ತೆ ಪಾದಚಾರಿ ರಸ್ತೆಯಲ್ಲಿ ವ್ಯಾಪಾರ ಮಳಿಗೆಗಳನ್ನಿಟ್ಟುಕೊಳ್ಳುತ್ತಾರೆ.

ಪದೇ ಪದೇ ಈ ರೀತಿ ಮಾಡುತ್ತಿರುವ ಬೀದಿ ವ್ಯಾಪಾರಿಗಳ ಮೇಲೆ ಬಿಬಿಎಂಪಿ ನಿಗಾವಹಿಸಿದ್ದು, ಮಿತಿ ಮೀರಿದರೆ ಅವರ ವಿರುದ್ಧ ಕೇಸು ದಾಖಲಿಸಲು ಚಿಂತನೆ ನಡೆಸಿದೆ.

ಪಾದಚಾರಿ ಮಾರ್ಗ ಪಾದಚಾರಿಗಳಿಗಿರುವುದಾಗಿದೆ. ನಗರದ ರಸ್ತೆಗಳಲ್ಲಿ ಪಾದಚಾರಿಗಳ ಹಿತಾಸಕ್ತಿ ಮತ್ತು ಸುರಕ್ಷತೆ ಕಾಪಾಡುವ ಹೊಣೆ ನಮ್ಮದು. ಈ ರೀತಿಯ ಕೆಲಸಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ. ಕೆಲವೊಂದು ಬಾರಿ ನಾವು ಬೀದಿ ವ್ಯಾಪಾರಿಗಳಿಗೆ ಎಚ್ಚರಿಕೆಗಳನ್ನು ನೀಡುತ್ತಿರುತ್ತೇವೆ. ನಮ್ಮ ಮಾತು ಕೇಳದೇ ಇದ್ದಾಗ ನಾವೇ ಅಲ್ಲಿಗೆ ಹೋಗಿ ಕೇಸು ದಾಖಲಿಸುತ್ತೇನೆ ಎಂದಿದ್ದಾರೆ ಬಿಬಿಎಂಪಿ ಎಂಜನಿಯರ್. ಈ ಕಾರ್ಯಾಚರಣೆ ಮೂಲಕ ಬೀದಿಯನ್ನು ಶಾಶ್ವತ ಮತ್ತು ತಾತ್ಕಾಲಿಕವಾಗಿ ಅತಿಕ್ರಮಣ ಮಾಡಿದ್ದವರನ್ನು ತೆರವುಗೊಳಿಸಲಾಗಿದೆ. ಮುಂದೆಯೂ ನಿಯಮಿತವಾಗಿ ಈ ರೀತಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರುಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT