ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಹೊರೆ ಆಸರೆ ತಂಡ ದ ಸ್ವಯಂಸೇವಕರಿಗೆ ಗೌರವ

ಕೊರೊನಾ ಯೋಧರಿಗೆ ಪಾಲಿಕೆಯಿಂದ ಪ್ರಶಂಸಾ ಪತ್ರ ವಿತರಣೆ
Last Updated 30 ಸೆಪ್ಟೆಂಬರ್ 2020, 17:11 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವತಿಯಿಂದ ರಚಿಸಲಾಗಿದ್ದ ‘ನೆರೆಹೊರೆ ಆಸರೆ ತಂಡ’ಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದವರಿಗೆ ಬುಧವಾರ ಪ್ರಶಂಸಾ ಪತ್ರ ವಿತರಿಸಲಾಯಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಆರಂಭಿಸಿದಾಗ ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗುವವರ ಮೇಲೆ ನಿಗಾವಹಿಸಲು ಹಿರಿಯ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚನೆ ಮಾಡಲಾಗಿತ್ತು.‘ಕೋವಿಡ್ ವ್ಯಾಪಿಸಲು ಆರಂಭಿಸಿದ ಸಂದರ್ಭದಲ್ಲಿ, ಹೊರ ರಾಜ್ಯಗಳಿಂದ ರೈಲು, ವಿಮಾನ, ರಸ್ತೆ ಮಾರ್ಗದಲ್ಲಿ ಬರುವವರರು ಮನೆಯಲ್ಲಿ ಪ್ರತ್ಯೇಕವಾಸಕ್ಕೆ ಒಳಗಾಗುತ್ತಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಹಾಗೂ ಅವರ ಮೇಲೆ ನಿಗಾವಹಿಸಲು ‘ನೆರೆಹೊರೆ ಆಸರೆ’ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳಲ್ಲಿ ನಗರದ 26 ಸಾವಿರ ಮಂದಿ ಸ್ವಯಂಸೇವಕರಾಗಿ ಹೆಸರು ನೋಂದಾಯಿಸಿದ್ದರು.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಕೋವಿಡ್ ವ್ಯಾಪಿಸುತ್ತಿರುವಂತಹ ಸಂದಿಗ್ಧ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಯಾರೂ ಮುಂದೆ ಬರುವುದಿಲ್ಲ. ಅಂತಹ ಕಠಿಣ ಸಮಯದಲ್ಲೂ ನೀವೆಲ್ಲಾ ಸ್ವಯಂಸೇವಕರಾಗಿ ಮುಂದೆ ಬಂದು ಕೆಲಸ ಮಾಡಿದ್ದೀರಿ. ಇದು ಸುಲಭದ ಮಾತಲ್ಲ. ಆದ್ದರಿಂದ ನಿಮ್ಮನ್ನೂ ಕೊರೊನಾ ಯೋಧರೆಂದೇ ಕರೆಯುತ್ತೇವೆ. ಆರು ತಿಂಗಳಿಂದ ಇಂತಹ ಕ್ಲಿಷ್ಟಕರವಾದ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸ್ವಯಂಸೇವಕರಾಗಿನಿರ್ವಹಿಸಿದ ನಿಮಗೆ ಧನ್ಯವಾದ’ ಎಂದರು.

ವಿಶೇಷ ಆಯುಕ್ತ (ಆಡಳಿತ) ಜೆ.ಮಂಜುನಾಥ್, ‘ನೆರೆಹೊರೆ ಆಸರೆ ತಂಡಗಳಲ್ಲಿ ಸ್ವಯಂಸೇವಕರಾಗಿ ಉತ್ತಮ ಸೇವೆ ಸಲ್ಲಿಸಿದ 4 ಸಾವಿರ ಮಂದಿಯನ್ನು ಗುರುತಿಸಿ ಪ್ರಶಂಸಾ ಪತ್ರ ವಿತರಿಸಲಾಗುತ್ತಿದೆ. ಇಂದು ಸಾಂಕೇತಿಕವಾಗಿ 88 ಮಂದಿಗೆ ವಿತರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT