ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ ನೀಡಿದ ದಂಡ ಪ್ರಯೋಗ

ಸ್ವಚ್ಛತೆ ಕಾಪಾಡದಿದ್ದರೆ ತೆರಬೇಕಾದೀತು ಭಾರಿ ಮೊತ್ತ l ಕಸ ವಿಂಗಡಣೆ ಹೆಚ್ಚಳ
Last Updated 27 ಜನವರಿ 2020, 19:38 IST
ಅಕ್ಷರ ಗಾತ್ರ

ಬೆಂಗಳೂರು: ಕಸವನ್ನು ಬೇರ್ಪಡಿಸಿ ನೀಡದವರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಹಾಗೂ ನಿಷೇಧಿತ ಪ್ಲಾಸ್ಟಿಕ್‌ ಬಳಸುವವರಿಗೆ ದಂಡ ಹಾಕುವ ನಿರ್ಧಾರ ಫಲ ನೀಡಲಾರಂಭಿಸಿದೆ ಎಂದು ಬಿಬಿಎಂಪಿ ಹೇಳಿದೆ.

‘ದುಬಾರಿ ದಂಡ ವಿಧಿಸಲಾರಂಭಿಸಿದ ಬಳಿಕ ಕಸ ವಿಂಗಡಣೆ ಪ್ರಮಾಣ ಹೆಚ್ಚಳವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿಯ ಪ್ರಮಾಣವೂ ಕಡಿಮೆಯಾಗುತ್ತಿದೆ. ಈ ಬಗ್ಗೆ ನಿಖರ ವಿವರಗಳನ್ನು ನಾವು ಇನ್ನಷ್ಟೇ ಕಲೆ ಹಾಕಬೇಕಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್‌ ತಿಳಿಸಿದರು.

ನಗರದ ಸ್ವಚ್ಛತೆ ಮೇಲೆ ನಿಗಾ ಇಡುವ ಸಲುವಾಗಿ ಬಿಬಿಎಂಪಿ 2019ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಮಾರ್ಷಲ್‌ಗಳನ್ನು ನೇಮಿಸಿತ್ತು. ಬಳಿಕ ಐದು ತಿಂಗಳುಗಳಲ್ಲಿ ಒಟ್ಟು ₹ 63.92 ಲಕ್ಷ ದಂಡ ವಿಧಿಸಲಾಗಿದೆ. ಕಸವನ್ನು ಸಮರ್ಪಕವಾಗಿ ವಿಲೇ ಮಾಡದ ಮಳಿಗೆಗಳ ಮೇಲೂ ದಿಢೀರ್‌ ದಾಳಿ ಸಂಘಟಿಸುತ್ತಿರುವ ಪಾಲಿಕೆ ಅಧಿಕಾರಿಗಳು ಲಕ್ಷಗಟ್ಟಲೆ ದಂಡ ವಿಧಿಸುತ್ತಿದ್ದಾರೆ.

‘ಭಾರಿ ದಂಡ ವಿಧಿಸಲು ಆರಂಭಿಸಿದ ಬಳಿಕ ಪ್ರತಿ ತಿಂಗಳೂ ₹ 13 ಲಕ್ಷದಿಂದ ₹ 15 ಲಕ್ಷ ದಂಡದ ರೂಪದಲ್ಲಿ ಸಂಗ್ರಹವಾಗುತ್ತಿದೆ.
ಕೆಲವು ಮಳಿಗೆಗಳಿಗೆ ₹ 1 ಲಕ್ಷಕ್ಕೂ ಅಧಿಕ ದಂಡ ವಿಧಿಸಿದ್ದೇವೆ. ಕೆಲವರು ದಂಡ ವಿಧಿಸಿದ ಬಳಿಕವೂ ಕಸ ವಿಂಗಡಣೆ ಸರಿಯಾಗಿ ಮಾಡುತ್ತಿಲ್ಲ. ಪ್ಲಾಸ್ಟಿಕ್‌ ಬಳಕೆಯನ್ನೂ ನಿಲ್ಲಿಸಿಲ್ಲ. ಇಂತಹ ಮಳಿಗೆಗಳ ಪರವಾನಗಿ ರದ್ದುಪಡಿಸಿ ಅವುಗಳಿಗೆ ಬೀಗ ಹಾಕಲಿದ್ದೇವೆ’ ಎಂದು ರಂದೀಪ್‌ ಹೇಳಿದರು.

9,307: ಕಸ ನಿರ್ವಹಣೆ ನಿಯಮ ಉಲ್ಲಂಘನೆಗೆ ದಂಡ ವಿಧಿಸಿದ ಒಟ್ಟು ಪ್ರಕರಣಗಳು (2019ರ ಸೆಪ್ಟೆಂಬರ್‌ನಿಂದ)

5,813:ಕಸ ವಿಂಗಡಣೆ ಮಾಡದ್ದಕ್ಕೆ, ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದ್ದಕ್ಕೆ ದಂಡ ವಿಧಿಸಿದ ಪ್ರಕರಣಗಳು

₹ 33.95 ಲಕ್ಷ:ವಿಧಿಸಿದ ದಂಡದ ಮೊತ್ತ

2,987:ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ದಂಡ ವಿಧಿಸಿದ ಪ್ರಕರಣಗಳು

₹ 27.35 ಲಕ್ಷ:ವಿಧಿಸಿದ ದಂಡದ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT