ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರಲು ಸಿದ್ಧರಾದ ಪ್ರವೀಣ್ ಪಟೇಲ್

Last Updated 30 ಮಾರ್ಚ್ 2018, 8:52 IST
ಅಕ್ಷರ ಗಾತ್ರ

ಭದ್ರಾವತಿ: ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಕ್ಷೇತ್ರದಲ್ಲಿ ಸಂಚರಿಸಿದ್ದ ಪ್ರವೀಣ್ ಪಟೇಲ್ ಗುರುವಾರದ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಅವರು ‘ಪ್ರಜಾವಾಣಿ’ ಜತೆ ಮಾತನಾಡಿ, ಶನಿವಾರ ಶಿಕಾರಿಪುರದ ಯಡಿಯೂರಪ್ಪ ಅವರನಿವಾಸದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವುದು ಖಚಿತ ಎಂದು ಹೇಳಿದರು.

‘ಹದಿನೈದು ದಿನಗಳಿಂದ ಯಡಿಯೂರಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ನಾನು ಅವರ ಅಧಿಕೃತ ಆಹ್ವಾನದ ಮೇರೆಗೆ ಗುರುವಾರ ಬೆಂಗಳೂರಿನಲ್ಲಿ ಭೇಟಿಯಾದೆ. ಆಗ ಭದ್ರಾವತಿ ಅಭಿವೃದ್ಧಿಗೆ ಒತ್ತು ನೀಡುವುದಾದರೆ ಪಕ್ಷ ಸೇರುವುದಾಗಿ ಹೇಳಿದೆ. ಅದಕ್ಕೆ ಸ್ಪಂದಿಸಿದ ಅವರು, ಶಿವಮೊಗ್ಗ ಮಟ್ಟಕ್ಕೆ ಭದ್ರಾವತಿಯನ್ನು ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು. ಬೇರಾವುದೇ ಬೇಡಿಕೆಯನ್ನೂ ಇಟ್ಟಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾದ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಓಡಾಟ ನಡೆಸಿದ್ದು ಸತ್ಯ. ಆದರೆ ಅಲ್ಲಿನ ಬೆಳವಣಿಗೆ ಗಮನಿಸಿದಾಗ ನಿಷ್ಠಾವಂತರಿಗೆ ಸ್ಥಾನವಿಲ್ಲ ಎಂದು ಮನವರಿಕೆಯಾಯಿತು. ಬಳಿಕ ಪಕ್ಷ ಬದಲಿಸಲು ಮುಂದಾದೆ’ ಎಂದರು.

ಬಿಜೆಪಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡುವ ಕುರಿತು ನೇರವಾಗಿ ಯಡಿಯೂರಪ್ಪ ಏನನ್ನೂ ಹೇಳಿಲ್ಲ. ಅಲ್ಲಿದ್ದ ವಿದ್ಯುನ್ಮಾನ ಮಾಧ್ಯಮದವರ ಮುಂದೆ ಭದ್ರಾವತಿ ಕ್ಷೇತ್ರಕ್ಕೆ ನನ್ನ ಹೆಸರನ್ನು ಸೂಚಿಸಿದರು ಎಂದು ಬೇರೆಯವರಿಂದ ತಿಳಿಯಿತು. ಪಕ್ಷದ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಅವರನ್ನು ಭೇಟಿಯಾಗಿ, ಮುಂದಿನ ಹೆಜ್ಜೆ ಇಡಲಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT