ನಿರ್ವಹಣೆ ಇಲ್ಲದೆ ಸೊರಗಿದ ಕೆಂಪೇಗೌಡ ಗೋಪುರ

7

ನಿರ್ವಹಣೆ ಇಲ್ಲದೆ ಸೊರಗಿದ ಕೆಂಪೇಗೌಡ ಗೋಪುರ

Published:
Updated:
Deccan Herald

ಬೆಂಗಳೂರು: ಪಾಲಿಕೆಯ ಕೇಂದ್ರ ಕಚೇರಿಯ ಸಮೀಪದಲ್ಲಿರುವ ನಾಡಪ್ರಭು ಕೆಂಪೇಗೌಡ ಗೋಪುರ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಕೆಂಪೇಗೌಡರು ಬೆಂಗಳೂರಿನ ಗಡಿಗಳ ಗುರುತಿಗಾಗಿ ನಿರ್ಮಿಸಿದ್ದ ಗೋಪುರಗಳ ಮಾದರಿಯಲ್ಲೇ  2006ರಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದರ ತಳಭಾಗದಲ್ಲಿ ಕಾರಂಜಿ ಕೊಳವನ್ನೂ ರಚಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಗೋಪುರ ಹಾಗೂ ಕಾರಂಜಿ ಕೊಳದ ನಿರ್ವಹಣೆಯನ್ನೇ ಪಾಲಿಕೆ ಮರೆತುಬಿಟ್ಟಿದೆ. ಕೊಳದ ನೀರು ಪಾಚಿ ಕಟ್ಟಿದ್ದರೆ, ಗೋಪುರದ ಕೆಲವು ಕಲ್ಲುಗಳು ಉದುರಿ ಬಿದ್ದಿವೆ.

‘ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ನೆನಪಿನಗಾಗಿ ಕಟ್ಟಿರುವ ಈ ಗೋಪುರದ ಸಂರಕ್ಷಣೆ ನಮ್ಮ ಕರ್ತವ್ಯ. ಈ ಗೋಪುರವನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳುವಂತೆ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮೇಯರ್‌ ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !