ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳಿಗೂ ಶುಚಿತ್ವ ಕಿಟ್: ಮೇಯರ್

ಸರ್ಜಾಪುರ ಜಂಕ್ಷನ್‌: ಪಾದಚಾರಿ ಮೇಲ್ಸೇತುವೆ ಉದ್ಘಾಟನೆ
Last Updated 22 ಜನವರಿ 2020, 21:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಕೊಳೆಗೇರಿಗಳಲ್ಲಿ ವಾಸಿಸುವವರಿಗೂ ಮುಂದಿನ ದಿನಗಳಲ್ಲಿ ಶುಚಿತ್ವದ ಕಿಟ್ ವಿತರಿಸಲಾಗುವುದು’ ಎಂದು ಮೇಯರ್ ಎಂ. ಗೌತಮ್‌ಕುಮಾರ್ ತಿಳಿಸಿದರು.

ಪೌರ ಕಾರ್ಮಿಕರಿಗೆ ಕಿಟ್ ವಿತರಿಸಿ ಬುಧವಾರ ಮಾತನಾಡಿದ ಅವರು, ‘‍150 ಪೌರಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಗಿದೆ. ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ನಗರ ಸುಂದರವಾಗಿರಲಿದೆ ಮತ್ತು ನಾಗರಿಕರೂ ಆರೋಗ್ಯದಿಂದ ಇರಬಹುದು’ ಎಂದರು.

ಪಾದಚಾರಿ ಮೇಲ್ಸೇತುವೆ ಉದ್ಘಾಟನೆ: ಹೊಸೂರು ಮುಖ್ಯರಸ್ತೆಯ ಸರ್ಜಾಪುರ ಜಂಕ್ಷನ್‌ನಲ್ಲಿ ಪಾದಚಾರಿ ಮೇಲ್ಸೇತುವೆ ಉದ್ಘಾಟಿಸಿದ ಅವರು, ‘ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಕಾಶ್ ಆರ್ಟ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ, ಎರಡೂ ಬದಿಗಳಲ್ಲಿ ಲಿಫ್ಟ್‌, ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ಬೇರೆಡೆಯೂ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಬೇಕಿದೆ’ ಎಂದರು.

‘ಸೇತುವೆಗೆ ₹2.50 ಕೋಟಿ ವೆಚ್ಚವಾಗಿದೆ. ಇದನ್ನು ಪ್ರಕಾಶ್ ಆರ್ಟ್ಸ್‌ ಸಂಸ್ಥೆಯೇ ಭರಿಸಿದೆ. ಸಂಸ್ಥೆಯು ಬಿಬಿಎಂಪಿಗೆ ಪ್ರತಿವರ್ಷ ₹3.6 ಲಕ್ಷ ನೆಲ ಬಾಡಿಗೆ ಮತ್ತು ₹13.70 ಲಕ್ಷ ಜಾಹೀರಾತು ಶುಲ್ಕವನ್ನೂ ಪಾವತಿಸಬೇಕಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT