ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್‌ ಬೆಂಗಳೂರು– ಮೇಯರ್‌ ಏನ್‌ ಮಾಡ್ಬೇಕು?

Last Updated 4 ಅಕ್ಟೋಬರ್ 2019, 20:23 IST
ಅಕ್ಷರ ಗಾತ್ರ

ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನಲುಗುತ್ತಿರುವ ರಾಜಧಾನಿಗೆ ‘ಬ್ರ್ಯಾಂಡ್ ಬೆಂಗಳೂರು’ ಎಂಬ ಹೆಗ್ಗಳಿಕೆಯನ್ನು ಮರಳಿ ತರಲು ಏನು ಮಾಡಬೇಕು? ಅದಕ್ಕಾಗಿ ಆದ್ಯತೆಯ ಕೆಲಸಗಳು ಏನಾಗಬೇಕು? ನಿಮ್ಮ ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ನೂತನ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ‘ನವ ನಗರೋತ್ಥಾನ’ಕ್ಕೆ ಕಾರ್ಯಸೂಚಿ ಸಿದ್ಧಪಡಿಸುವ ಕಾರ್ಯಕ್ಕೆ ಕೈ ಜೋಡಿಸಿ. 50 ಪದಗಳ ಮಿತಿಯಲ್ಲಿ ನಿಮ್ಮ ಸಲಹೆಗಳನ್ನು (ಹೆಸರು, ಭಾವಚಿತ್ರ ಸಹಿತ) ಕಳುಹಿಸಿ. ವಾಟ್ಸ್‌ ಆ್ಯಪ್‌ ಸಂಖ್ಯೆ: 95133 22930

ಪೌರಕಾರ್ಮಿಕರ ಸೌಲಭ್ಯ ಹೆಚ್ಚಿಸಿ

ಪಾಲಿಕೆ ಅಧಿಕಾರಿಗಳು ಏನೇ ಯೋಜನೆಗಳನ್ನು ತಂದರೂ ನಗರದ ಅಂದ ಕಾಯುತ್ತಿರುವುದು ಪೌರಕಾರ್ಮಿಕರು ಎಂದರೆ ತಪ್ಪಾಗಲಾರದು. ಅವರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು ನೂತನ ಮೇಯರ್‌ ಆದ್ಯತೆ ನೀಡಲಿ.

-ವೆಂಕಟೇಶ್, ಬೆಂಗಳೂರು

ಪ್ಲಾಸ್ಟಿಕ್‌ ಬಳಕೆ ತಪ್ಪಿಸಿ

ಪ್ಲಾಸ್ಟಿಕ್‌ ನಿಷೇಧ ಮಾಡಿರುವ ಪಾಲಿಕೆ ಕಾರ್ಯ ಶ್ಲಾಘನೀಯ. ಆದರೆ, ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳ ಬಳಕೆ ಎಗ್ಗಿಲ್ಲದೆ ಸಾಗುತ್ತಿದೆ. ಮೇಲ್ನೋಟಕ್ಕೆ ಪ್ಲಾಸ್ಟಿಕ್‌ ಮುಕ್ತ ನಗರ ಎಂದು ಕಾಣಿಸಿದರೂ, ಮರೆಯಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ನಿಮ್ಮ ಗಮನ ಇದರ ಮೇಲೂ ಇರಲಿ.

-ಸಂಜಯ್‌, ವಿಜಯನಗರ

ಕನ್ನಡ ಕಾಪಾಡಿ

ಬೆಂಗಳೂರು ಬಹುಭಾಷಿಗರ ನಗರವಾಗಿ ಮಾರ್ಪಟ್ಟಿದೆ. ಅವರವರದ್ದೇ ಸಂಘ ಸಂಸ್ಥೆ ಕಟ್ಟಿಕೊಂಡು ಸಂಘಟಿತರಾಗಿದ್ದಾರೆ. ಆದರೆ, ಅವರು ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳಿಗೆ ಬೆಲೆ ನೀಡುತ್ತಿಲ್ಲ. ಅವರಿಗೂ ನಮ್ಮ ಕಸ್ತೂರಿ ಕನ್ನಡದ ಕಂಪು ಹರಡಿ.

-ಸಿದ್ದು, ಹಂಪಿನಗರ

ಉಗುಳುವವರ ನಿಯಂತ್ರಿಸಿ

ರಸ್ತೆ ಅಕ್ಕಪಕ್ಕದ ಗೋಡೆಗಳ ಮೇಲೆ ಸಾರ್ವಜನಿಕರು ಉಗುಳಿದ ಪಾನ್, ಬೀಡಾದ ಕಲೆಗಳು ನಗರದ ಅಂದ ಕೆಡಿಸುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ದಯವಿಟ್ಟು ಗೋಡೆಗಳ ಮೇಲೆ ಉಗುಳದಂತೆ ಸೂಚನೆ ನೀಡಬೇಕು. ನಿಯಮ ಮೀರಿದವರಿಗೆ ಶಿಕ್ಷೆ ವಿಧಿಸಬೇಕು.‌

-ಹನುಮಂತಯ್ಯ, ಕಲ್ಯಾಣ ನಗರ

ಕಾಮಗಾರಿಗೂ ಖಾತರಿ ನೀಡಿ

ಒಂದು ದಿನಬಳಕೆಯ ವಸ್ತುವಿನ ಮೇಲೆ ಅದರ ಬಾಳಿಕೆ ಅವಧಿ ಖಾತರಿಪಡಿಸುತ್ತಾರೆ. ಆದರೆ, ಜನಬಳಕೆಯ ವಸ್ತುಗಳಾದ ರಸ್ತೆ, ಚರಂಡಿ, ಸೇತುವೆ ಮುಂತಾದ ಕಾಮಗಾರಿಗಳ ಬಾಳಿಕೆ ಭರವಸೆ ಯಾಕೆ ನೀಡುವುದಿಲ್ಲ? ಇನ್ನು ಮುಂದಿನ ಕಾಮಗಾರಿಗಳಿಗೆ ಖಾತರಿ ನೀಡಿ. ಕಾಮಗಾರಿ ಕಳಪೆಯಾಗಿದ್ದರೆ ದೂರು ನೀಡಬಹುದು.

-ಸಂದೀಪ್‌ ಕೃಷ್ಣ, ಸಂಪಂಗಿ ರಾಮನಗರ

ಕಾಮಗಾರಿ ಮಾಡಿ

ಮೇಯರ್‌ ಕಾರ್ಯವೈಖರಿ ಪಾರದರ್ಶಕತೆಯಿಂದ ಕೂಡಿರಲಿ. ಅಧಿಕಾರಿಗಳ ಕಾರ್ಯವೈಖರಿ ಮೇಲೆ ಹದ್ದಿನ ಕಣ್ಣಿಡಬೇಕು. ಮೇಯರ್‌ ಅವರು ಸಮಾರಂಭಗಳಿಗಿಂತ ಹೆಚ್ಚಾಗಿ ಕಾಮಗಾರಿ ನಡೆಯುವ ಸ್ಥಳ ಹಾಗೂ ಕಚೇರಿಯಲ್ಲಿ ಇದ್ದು ಕೆಲಸ ಮಾಡಲಿ.

-ರಾಜೀವ್‌, ಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT