ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬ್ರ್ಯಾಂಡ್ ಬೆಂಗಳೂರು’ - ಮೇಯರ್‌ ಏನ್‌ ಮಾಡ್ಬೇಕು?

Last Updated 5 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನಲುಗುತ್ತಿರುವ ರಾಜಧಾನಿಗೆ ‘ಬ್ರ್ಯಾಂಡ್ ಬೆಂಗಳೂರು’ ಎಂಬ ಹೆಗ್ಗಳಿಕೆಯನ್ನು ಮರಳಿ ತರಲು ಏನು ಮಾಡಬೇಕು? ಅದಕ್ಕಾಗಿ ಆದ್ಯತೆಯ ಕೆಲಸಗಳು ಏನಾಗಬೇಕು? ನಿಮ್ಮ ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ನೂತನ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ‘ನವ ನಗರೋತ್ಥಾನ’ಕ್ಕೆ ಕಾರ್ಯಸೂಚಿ ಸಿದ್ಧಪಡಿಸುವ ಕಾರ್ಯಕ್ಕೆ ಕೈ ಜೋಡಿಸಿ. 50 ಪದಗಳ ಮಿತಿಯಲ್ಲಿ ನಿಮ್ಮ ಸಲಹೆಗಳನ್ನು (ಹೆಸರು, ಭಾವಚಿತ್ರ ಸಹಿತ) ಕಳುಹಿಸಿ. ವಾಟ್ಸ್‌ ಆ್ಯಪ್‌ ಸಂಖ್ಯೆ: 95133 22930

ಪಾದಚಾರಿಗಳಿಗೆ ದಾರಿ ತೋರಿ

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇವು ಉಗುಳುವ ವಿಷಕಾರಿ ಹೊಗೆಯಿಂದ ಉದ್ಯಾನ ನಗರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇತ್ತ ಪಾದಚಾರಿ ಮಾರ್ಗಗಳೂ ಒತ್ತುವರಿಯಾಗಿ ನಡಿಗೆದಾರರಿಗೆ ಸ್ಥಳವೇ ಇಲ್ಲವಾಗಿದೆ. ದಟ್ಟಣೆಯ ನಗರದಲ್ಲಿ ಪಾದಚಾರಿಗಳಿಗೆ ದಾರಿ ಮಾಡಿಕೊಡಿ.

ಅರುಣ್ ಕುಮಾರ್‌, ಕೆಂಗೇರಿ

ಆಧುನೀಕರಣ ಬೇಡ

ಬೆಂಗಳೂರು ದಿನೇದಿನೇ ವೇಗವಾದ ಆಧುನೀಕರಣಕ್ಕೆ ಒಳಗಾಗುತ್ತಿದೆ. ಇದರಿಂದ ನಗರದ ಭವ್ಯ ಐತಿಹಾಸಿಕ ಸ್ಥಳಗಳು ಮಹತ್ವ ಕಳೆದುಕೊಳ್ಳುತ್ತಿವೆ. ಮರಗಳನ್ನು ಸೀಳಿ ಕಟ್ಟಡಗಳು ನಿರ್ಮಾಣ ಆಗುತ್ತಿವೆ. ಇದರಿಂದ ಉದ್ಯಾನನಗರ ಪಟ್ಟ ಕಳಚಲಿದೆ.

ಗೋಪಾಲಕೃಷ್ಣ, ಬೆಂಗಳೂರು

ಒಳಚರಂಡಿ ವ್ಯವಸ್ಥೆ ಸರಿಪಡಿಸಿ

ನಗರದ ಒಳಚರಂಡಿ ವ್ಯವಸ್ಥೆ ಸುಸ್ಥಿತಿಯಲ್ಲಿ ಇರದ ಕಾರಣ ಮಳೆ ಬಂದ ಕೂಡಲೇ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ. ರಸ್ತೆಯಲ್ಲಿ ನೀರು ನಿಲ್ಲಲು ಗುಂಡಿಗಳೂ ನಿರ್ಮಾಣವಾಗಿವೆ. ಹಾಳಾಗಿರುವ ಚರಂಡಿ ವ್ಯವಸ್ಥೆ ದುರಸ್ತಿ ಮಾಡಿ, ರಸ್ತೆಯ ಮೇಲೆ ಕೊಳಚೆ ಬಾರದಂತೆ ತಡೆಯಬೇಕಿದೆ.

ಮಂಜುನಾಥ್, ಬೆಂಗಳೂರು ನಿವಾಸಿ

ಹೆಚ್ಚು ಗಿಡ ನೆಟ್ಟು ಪೋಷಿಸಿ

ಕಾಮಗಾರಿಗಳ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡುವುದನ್ನು ಬಿಡಿ. ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಇರುವ ಮರಗಳ ಸಮೀಕ್ಷೆ ನಡೆಸಿ, ಅವುಗಳ ಮೇಲೆ ನೋಂದಣಿ ಸಂಖ್ಯೆ ಹಾಕಿ. ಯಾರಾದರೂ ಮರ ಕಡಿದರೆ ಆಗ ಅವರ ವಿರುದ್ಧ ಸುಲಭವಾಗಿ ಕ್ರಮಕೈಗೊಳ್ಳಬಹುದು.

ಈಶ್ವರ್, ಕೋರಮಂಗಲ

ಪ್ರಾಣಿಗಳ ಬಯಲು ಶೌಚ ತಡೆಯಿರಿ

ನಗರವಾಸಿಗಳು ತಮ್ಮ ಸಾಕು ಪ್ರಾಣಿಗಳನ್ನು ವಿಹಾರಕ್ಕೆ ಕರೆತಂದು ರಸ್ತೆಗಳ ಮೇಲೆ ಮಲ, ಮೂತ್ರ ವಿಸರ್ಜನೆ ಮಾಡಿಸುತ್ತಾರೆ. ಜನರು ಬಯಲು ಶೌಚದ ಸಮಸ್ಯೆಗಿಂತ ಸಾಕು ಪ್ರಾಣಿಗಳ ಬಯಲು ಶೌಚದ ಸಮಸ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು.

ನಾಗೇಶ್, ಯಲಹಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT