ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚಾಗದ ಅನುದಾನ, ಅಭಿವೃದ್ಧಿ ಬಾಕಿ

Last Updated 6 ಜುಲೈ 2018, 20:28 IST
ಅಕ್ಷರ ಗಾತ್ರ

ಬೆಂಗಳೂರು: ನಗರಕ್ಕೆ ವಿಶೇಷ ಮೂಲಸೌಲಭ್ಯ ಕಲ್ಪಿಸಲು ಕೊಟ್ಟ ವಿಶೇಷ ಅನುದಾನದ ಬಹುಪಾಲು ಮೊತ್ತ ಖರ್ಚಾಗದೇ ಉಳಿದಿದೆ. ಮಹಾಲೇಖಪಾಲರ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಅನುದಾನವನ್ನು ಸರಿಯಾಗಿ ಬಳಸದ ಕಾರಣ ಹೊಸ ಅನುದಾನ ಪಡೆಯಲು ಅಡೆತಡೆ ಉಂಟಾಗಿದೆ. ಉಳಿಕೆ ಅನುದಾನದ ವಿವರ ಹೀಗಿದೆ.

₹ 7,300 ಕೋಟಿ -2016– 17ರಲ್ಲಿ ಮಂಜೂರಾದ ವಿಶೇಷ ಅನುದಾನ

₹ 4,970 ಕೋಟಿ - ಬಿಡುಗಡೆಯಾದ ಹಣ

₹ 2,330 ಕೋಟಿ -ಬಿಡುಗಡೆಗೆ ಬಾಕಿಯಿರುವ ಮೊತ್ತ

₹ 1,279 ಕೋಟಿ -ಬಿಡುಗಡೆಯಾದ ಹಣದಲ್ಲಿ ಖರ್ಚಾಗದ ಮೊತ್ತ

ಯಾವುದಕ್ಕೆ ಬಳಕೆಯಾಗಬೇಕಿತ್ತು?

₹ 1,079 ಕೋಟಿ -ವಿಶೇಷ ಮೂಲಸೌಲಭ್ಯಕ್ಕೆ

₹ 76 ಕೋಟಿ -ಉಪನಗರ ರೈಲು ಯೋಜನೆಗೆ

₹ 126 ಕೋಟಿ - ಜಲಮಂಡಳಿಗೆ

ಏನೇನು ವಿಶೇಷ ಮೂಲಸೌಲಭ್ಯ?

ರಸ್ತೆ, ಉದ್ಯಾನ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ನಾಗರಿಕ ಸುರಕ್ಷತೆ, ಸುಗಮ ಸಂಚಾರ ವ್ಯವಸ್ಥೆ, ನಗರದ ಸ್ವಚ್ಛತೆ, ಆರೋಗ್ಯ ಸೌಲಭ್ಯ

ಜಲಮಂಡಳಿ -ಹೊಸ ಪೈಪ್‌ಲೈನ್‌ ಅಳವಡಿಕೆ,ಒಳಚರಂಡಿ ಅಭಿವೃದ್ಧಿ, ಕಾಲುವೆಗಳ ಸ್ವಚ್ಛತೆ...

ಉಪನಗರ ರೈಲು -ನಿಲ್ದಾಣಗಳ ಅಭಿವೃದ್ಧಿ, ಹೆಚ್ಚುವರಿ ರೈಲುಗಳ ಸಂಚಾರ...

ಬಿಡುಗಡೆಯಾದ ಹಣವನ್ನು ಖರ್ಚು ಮಾಡಬೇಕು. ಕೊರತೆ ಉಂಟಾದರೆ ವಿಶೇಷ ಮಂಜೂರಾತಿ ಪಡೆಯಲು ಅವಕಾಶವಿದೆ.

ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತ ಬಿಬಿಎಂಪಿ (ಸಾಮಾನ್ಯ ಸಭೆಯಲ್ಲಿ ಹೇಳಿದ್ದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT