ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಬಡವರಿಗೆ ಇಂದಿನಿಂದ ಉಚಿತ ಹಾಲು

Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡಂತೆ ತಡೆಯಲು ಜಾರಿಗೊಳಿಸಿರುವ ಲಾಕ್‌ಡೌನ್‌ ಅವಧಿ ಮುಗಿಯುವರೆಗೆ ನಗರದಲ್ಲಿರುವ ಬಡವರ್ಗದ ಜನರಿಗೆ, ಕೊಳಗೇರಿ ನಿವಾಸಿಗಳಿಗೆ ಪಾಲಿಕೆ ನೆರವಿನಿಂದ ಉಚಿತವಾಗಿ ನಂದಿನಿ ಹಾಲು ವಿತರಿಸಲು ಸರ್ಕಾರ ನಿರ್ಧರಿಸಿದೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ, ‘ನಾಳೆಯಿಂದ ಏಪ್ರಿಲ್ 14ರವರೆಗೆ ನಿತ್ಯ
2 ಲಕ್ಷ ಲೀಟರ್‌ಗಳಿಂದ 3 ಲಕ್ಷ ಲೀಟರ್‌ಗಳಷ್ಟು ನಂದಿನಿ ಹಾಲನ್ನು ನಗರದಲ್ಲಿ ಬಡವರಿಗೆ ವಿತರಿಸಲಿದ್ದೇವೆ. ಈ ಸಲುವಾಗಿ ಎಲ್ಲಾ ವಾರ್ಡ್‌ಗೂ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ' ಎಂದರು.

'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ₹ 35 ಕೋಟಿ ವೆಚ್ಚ ವಾಗಬಹುದು. ಈ ಹಾಲು ಮತ್ತೆ ಮಾರಾಟ ಆಗುವುದನ್ನು ತಪ್ಪಿಸಲು ಅವುಗಳ ಪೊಟ್ಟಣಗಳಲ್ಲಿ ‘ಉಚಿತ ವಿತರಣೆಗೆ’ ಎಂದು ಮುದ್ರಿಸುವಂತೆ ಹಾಲು ಉತ್ಪಾದಕರ ಒಕ್ಕೂಟದವರಿಗೆ ಸಲಹೆ ನೀಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT