ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಕಸವನ್ನು ಆವರಣದಲ್ಲೇ ಸಂಸ್ಕರಿಸುವುದಕ್ಕೆ ಒಪ್ಪಿಗೆ: ಬಿಬಿಎಂಪಿ ಸುತ್ತೋಲೆ

ಸುತ್ತೋಲೆ ಹೊರಡಿಸಿದ ಬಿಬಿಎಂಪಿ
Last Updated 31 ಮಾರ್ಚ್ 2022, 19:25 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಕಸ ಉತ್ಪಾದಿಸುವವರು ಅದನ್ನು ತಮ್ಮ ಕಟ್ಟಡದ ಆವರಣದಲ್ಲಿಯೇ ಸಂಸ್ಕರಿಸುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

100ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳು, ನಿತ್ಯ 100 ಕೆ.ಜಿ.ಗೂ ಅಧಿಕ ಕಸ ಉತ್ಪಾದಿಸುವವರು, 5000 ಚ.ಮೀ.ಗೂ ಹೆಚ್ಚು ವಿಸ್ತೀರ್ಣದ ಮಾಲ್‌ಗಳು, ಪಂಚತಾರಾ ಹೋಟೆಲ್‌ಗಳು, ಐಟಿ– ಟೆಕ್ ಪಾರ್ಕ್‌ಗಳು, ಬಹು ರಾಷ್ಟ್ರೀಯ ಕಂಪನಿಗಳು, ಪ್ರವೇಶ ನಿಯಂತ್ರಿತ ಗೃಹಸಮುಚ್ಚಯ ಸಮುದಾಯಗಳು (ಗೇಟೆಡ್‌ ಕಮ್ಯುನಿಟಿ), ಕಲ್ಯಾಣ ಮಂಟಪಗಳು, ಸರ್ಕಾರಿ ಕಚೇರಿಗಳು ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ ವಿಲೇವಾರಿ ಮಾಡಲು ಕ್ರಮವಹಿಸುವಂತೆ ಬಿಬಿಎಂಪಿ ಸೂಚಿಸಿದೆ.

ಮಾನ್ಯತೆ ಪಡೆದ ಸೇವಾದಾರರ ಮೂಲಕ ಕಟ್ಟಡದ ಆವರಣದಲ್ಲಿ ಲಭ್ಯ ಇರುವ ಸ್ಥಳವನ್ನು ಬಳಸಿಕೊಂಡು ಕಸವನ್ನು ಬಯೋಮೀಥನೈಜೇಷನ್‌ ಮಾಡಬಹುದು ಅಥವಾ ಸಂಸ್ಕರಿಸಿ ಸಾವಯವ ಗೊಬ್ಬರ ತಯಾರಿಸಬಹುದು. ನೈರ್ಮಲ್ಯ ತ್ಯಾಜ್ಯ ಸಂಗ್ರಹಿಸಿ, ಅದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾನ್ಯತೆ ಪಡೆದ ಸಂಸ್ಥೆಗೆ ನೀಡುವ ಮೂಲಕ ವಿಲೇವಾರಿ ಮಾಡಬಹುದು. ಒಣ ಕಸವನ್ನು ಪಾಲಿಕೆಯ ಒಣ ಕಸ ಸಂಗ್ರಹ ಕೇಂದ್ರಗಳಿಗೆ ಅಥವಾ ನೋಂದಾಯಿತ ಸಗಟು ಕಸ ಸೇವಾದಾರರಿಗೆ ನೀಡಬಹುದು ಎಂದು ಬಿಬಿಎಂಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT