ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ವೆಬ್‌ಸೈಟ್‌‌ನಲ್ಲಿ ಕಾಮಗಾರಿ ಸಮಗ್ರ ವಿವರ

ಬಿಬಿಎಂಪಿ ವೆಬ್‌ಸೈಟ್‌ಗೆ ಹೊಸ ರೂಪ l ಜನರೊಂದಿಗೆ ಸಂವಾದಕ್ಕೆ ನಾಗರಿಕ ವಲಯ ಸೇರ್ಪಡೆ
Last Updated 7 ನವೆಂಬರ್ 2020, 18:07 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವೆಬ್‌ಸೈಟ್‌ (https://bbmp.gov.in) ಅನ್ನು ಮರುವಿನ್ಯಾಸಗೊಳಿಸಿ, ಉನ್ನತೀಕರಿಸಲಾಗಿದ್ದು, ಪಾಲಿಕೆ ವತಿಯಿಂದ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿ ಗಳು, ಅವುಗಳ ಬಿಲ್‌ ಪಾವತಿ ವಿವರ ಸೇರಿದಂತೆ ಸಮಗ್ರ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಾಗಲಿದೆ.

ಮರುವಿನ್ಯಾಸದ ವೆಬ್‌ಸೈಟ್‌ ಕಾರ್ಯನಿರ್ವಹಣೆಗೆ ಶನಿವಾರ ಚಾಲನೆ ನೀಡಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ, ‘ಪಾರದರ್ಶಕತೆ ಇರಬೇಕು ಎಂಬ ಕಾರಣಕ್ಕೆ ವೆಬ್‌ಸೈಟ್‌ನಲ್ಲಿ ದಾಖಲೆ ಸಮೇತ ಎಲ್ಲ ಕಾಮಗಾರಿಗಳ ಮಾಹಿತಿ ಹಾಕಲಾಗಿದೆ. ಇವುಗಳನ್ನು ವೀಕ್ಷಿಸಿ ಪ್ರತಿಕ್ರಿಯಿಸಲೂ ನಾಗರಿಕರಿಗೆ ಅವಕಾಶ ಮಾಡಿಕೊಡಲಾಗಿದೆ’ ಎಂದರು.

‘2015ರ ಜೂನ್‌ನಿಂದ ಈವರೆಗಿನ ಎಲ್ಲ ಕಾಮಗಾರಿಗಳ ವಿವರ ಇದರಲ್ಲಿದೆ. ಪಾಲಿಕೆಯು ಯಾವುದಕ್ಕೆ, ಯಾವ ಉದ್ದೇಶಕ್ಕಾಗಿ ಹಣ ವ್ಯಯಿಸುತ್ತಿದೆ ಎಂಬ ಮಾಹಿತಿ ಇದರಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಪಾಲಿಕೆಯು ಯಾವ ಸೇವೆಗಳನ್ನು ನೀಡಲಿದೆ, ಎಷ್ಟು ವ್ಯಯಿಸಲಾಗಿದೆ ಎಂಬ ವಿವರವನ್ನೂ ಒದಗಿಸಲಾಗುವುದು’ ಎಂದು ತಿಳಿಸಿದರು.

ಆಯುಕ್ತ ಎನ್. ಮಂಜುನಾಥ್‌ ಪ್ರಸಾದ್, ‘ಪಾಲಿಕೆಯ ವೆಬ್‌ಸೈಟ್‌ bbmp.gov.inನಲ್ಲಿ ಹೊಸದಾಗಿ ‘ನಾಗರಿಕ ವಲಯ’ ರಚಿಸಲಾಗಿದ್ದು, ನಾಗರಿಕರ ವೀಕ್ಷಣೆ ವಿಭಾಗಕ್ಕೆ ಭೇಟಿ ನೀಡಿ ಕಾಮಗಾರಿಗಳ ಮಾಹಿತಿ ನೋಡಬಹುದು’ ಎಂದು ಅವರು ಹೇಳಿದರು.

‘ಕಾಮಗಾರಿ ಬಗ್ಗೆ ನಾಗರಿಕರ ಅನಿಸಿಕೆಗಳು ಅಥವಾ ಪ್ರತಿಕ್ರಿಯೆಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಲಿವೆ. ಆ ಅಧಿಕಾರಿ ಸ್ಥಳ ಪರಿಶೀಲಿಸಿ ವಾರದೊಳಗೆ ಅಭಿಪ್ರಾಯ ನೀಡಬೇಕು. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಹೊಸ ವಿನ್ಯಾಸದ ವೆಬ್‌ಸೈಟ್‌ನಲ್ಲಿ ಏನೇನಿದೆ ?

l2015ರಿಂದ ಈವರೆಗಿನ ಎಲ್ಲ ಕಾಮಗಾರಿಗಳ ದಾಖಲೆ ಸಹಿತ ವಿವರ

lಕಾಮಗಾರಿಯ ಅಂದಾಜು ವೆಚ್ಚ, ಕಾರ್ಯಾದೇಶ, ವಾರ್ಡ್‌, ವಿಭಾಗದ ಹೆಸರು

lಗುತ್ತಿಗೆದಾರರು ಮತ್ತು ಕಾಮಗಾರಿಯ ಪಾವತಿ ವಿವರ

lದಾಖಲೆಯ ಪ್ರತಿ, ಕಾಮಗಾರಿ ಮೊದಲಿನ ಹಾಗೂ ನಂತರದ ಫೋಟೊಗಳು

lಅಧಿಕಾರಿಗಳು ನೀಡಿರುವ ಅನುಮೋದನೆಗಳ ವಿವರ

lಪ್ರತಿಕ್ರಿಯೆ ನೀಡಲು, ಸಂಬಂಧಪಟ್ಟ ಫೋಟೊ ಅಪ್‌ಲೋಡ್‌ ಮಾಡಲು ನಾಗರಿಕರಿಗೆ ಅವಕಾಶ

lhttp://bbmp.gov.in/Citizenviewkannada.html ಲಿಂಕ್‌ನಲ್ಲಿ ಎಲ್ಲ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT