ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ: ಮುಖ್ಯ ಆಯುಕ್ತರ ಸಲಹೆ

ಫಿಕ್ಸ್ ಮೈ ಸ್ಟ್ರೀಟ್‌ ಆ್ಯಪ್ ಮೂಲಕ ಸಮೀಕ್ಷೆ ನಡೆಸಲು ಮುಖ್ಯ ಆಯುಕ್ತರ ಸಲಹೆ
Last Updated 10 ಮೇ 2022, 1:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ರಸ್ತೆ ಗುಂಡಿಗಳಿವೆ ಎಂಬುದನ್ನು ‘ಫಿಕ್ಸ್ ಮೈ ಸ್ಟ್ರೀಟ್‌’ ಆ್ಯಪ್ ಮೂಲಕ ಸಮೀಕ್ಷೆ ನಡೆಸಿ ತ್ವರಿತಗತಿಯಲ್ಲಿ ಅವುಗಳನ್ನು ಮುಚ್ಚಬೇಕು’ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಸೋಮವಾರ ಅವರು ಅಧಿಕಾರಿಗಳ ಸಭೆ ನಡೆಸಿದರು.

‘ಸಹಾಯಕ ಕಂದಾಯ ಅಧಿಕಾರಿಗಳು ಯಾವ ರಸ್ತೆಯಲ್ಲಿ ಗುಂಡಿಗಳಿವೆ, ಎಷ್ಟು ಗುಂಡಿಗಳಿವೆ ಎಂಬುದನ್ನು ಭೌಗೋಳಿಕ ಸ್ಥಳದ ಮಾಹಿತಿ ಹಾಗೂ ಛಾಯಾಚಿತ್ರಗಳ ಸಮೇತ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಬೇಕು. ಇದರ ಆಧಾರದಲ್ಲಿ ಡಾಂಬರು ಮಿಶ್ರಣ ಘಟಕದಿಂದ ಸ್ಥಳೀಯ ಎಂಜಿನಿಯರ್‌ಗಳು ಡಾಂಬರು ಪಡೆದುಕೊಳ್ಳಬೇಕು. ನಿಯಮಾನುಸಾರ ಗುಂಡಿಯ ಅಂಚುಗಳನ್ನು ಚೌಕ ಅಥವಾ ಆಯತಾಕಾರದಲ್ಲಿ ಕತ್ತಿರಿಸಿ ಡಾಂಬರು ಮಿಶ್ರಣ ಹಾಕಿ ಮುಚ್ಚಬೇಕು’ ಎಂದು ಅವರು ನಿರ್ದೇಶನ ನೀಡಿದರು.

ನಗರದ ಮುಖ್ಯ ರಸ್ತೆಗಳು ಹಾಗೂ ಉಪಮುಖ್ಯ ರಸ್ತೆಗಳಲ್ಲಿ ಯಾವುದೇ ರಸ್ತೆಗುಂಡಿಗಳು ಇಲ್ಲದಂತೆ ನೋಡಿಕೊಳ್ಳಬೇಕು.182 ಕಿ.ಮೀ ಉದ್ದದ ಮುಖ್ಯ ರಸ್ತೆಗಳು ಹಾಗೂ ಉಪಮುಖ್ಯ ರಸ್ತೆ ಗಳನ್ನು ಗುಂಡಿಗಳನ್ನು ಪೈಥಾನ್ ಯಂತ್ರ ಬಳಸಿ ಮುಚ್ಚಬೇಕು ಎಂದು ಸೂಚನೆ ನೀಡಿದರು.

ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕಿರುವ ರಸ್ತೆಗಳಲ್ಲೂ ಗುಂಡಿಗಳನ್ನು ಮುಚ್ಚಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ದೋಷ ಮುಕ್ತ ಅವಧಿ ಪೂರ್ಣಗೊಳ್ಳ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡರೆ ಗುತ್ತಿಗೆದಾರರ ಮೂಲಕವೇ ಅವುಗಳನ್ನು ಮುಚ್ಚಿಸಬೇಕು ಎಂದು ಸ್ಪಷ್ಟಪಡಿಸಿದರು.

‘ಮುಚ್ಚಿರುವ ಗುಂಡಿಗಳಲ್ಲಿ ಶೇ 1 ರಷ್ಟನ್ನು ವಲಯ ಆಯುಕ್ತರು, ಶೇ 5 ರಷ್ಟನ್ನು ಮುಖ್ಯ ಎಂಜಿನಿಯರ್‌ಗಳು, ಶೇ 30 ರಷ್ಟನ್ನು ಕಾರ್ಯಪಾಲಕ ಎಂಜಿ ನಿಯರ್‌ಗಳು ನಡೆಸಲು ‘ಫಿಕ್ಸ್‌ ಮೈ ಆ್ಯಪ್’ನಲ್ಲಿ ವ್ಯವಸ್ಥೆ ಕಲ್ಪಿಸಬೇಕೆಂದು.ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವುದನ್ನು ನಾಗರಿಕರು ವೀಕ್ಷಣೆ ಮಾಡಲು ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT