ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅನಾಹುತ– ಬಿಬಿಎಂಪಿಗೆ ₹350 ಕೋಟಿ ಪರಿಹಾರ ನಿಧಿ ಬಿಡುಗಡೆ

Last Updated 2 ಅಕ್ಟೋಬರ್ 2022, 22:12 IST
ಅಕ್ಷರ ಗಾತ್ರ

ಬೆಂಗಳೂರು: ಅತಿಹೆಚ್ಚು ಮಳೆಯಿಂದ ಉಂಟಾದ ಹಾನಿಗೆ ಪರಿಹಾರ ನೀಡಬೇಕೆಂಬ ಬಿಬಿಎಂಪಿ ಮನವಿಗೆ ಸ್ಪಂದಿಸಿರುವ ಸರ್ಕಾರ ₹350 ಕೋಟಿ ನೀಡಲು ಸಮ್ಮತಿಸಿದೆ.

ಬಿಬಿಎಂಪಿ ಮನವಿ ಸಲ್ಲಿಸಿದ 10 ದಿನದ ನಂತರ ನಗರಾಭಿವೃದ್ಧಿ ಇಲಾಖೆ ಸೆ.28ರಂದು ಪರಿಹಾರ ಮೊತ್ತಕ್ಕೆ ಅನುಮೋದನೆ ನೀಡಿದೆ. ಕೆರೆಗಳ ನಡುವಿನ ಸಂಪರ್ಕ ಜಾಲವನ್ನು (ರಾಜಕಾಲುವೆ) ದುರುಸ್ತಿಪಡಿಸಲು ₹317 ಕೋಟಿ ವೆಚ್ಚ ಮಾಡಬೇಕು ಎಂದು ಸೂಚಿಸಲಾಗಿದೆ.

ಮಳೆಯಿಂದ ತೀವ್ರಹಾನಿಯಾಗಿರುವ ಮಹದೇವಪುರ ವಿಧಾನಸಭೆ ಕ್ಷೇತ್ರಕ್ಕೆ ₹160 ಕೋಟಿ ಮಂಜೂರಾಗಿದೆ. ಕೆ.ಆರ್‌. ಪುರ– ₹40 ಕೋಟಿ, ಬೊಮ್ಮನಹಳ್ಳಿ– ₹65 ಕೋಟಿ, ಬೆಂಗಳೂರು ದಕ್ಷಿಣ– ₹27.25 ಕೋಟಿ ಹಾಗೂ ಯಲಹಂಕ ಮತ್ತು ಬ್ಯಾಟರಾಯನಪುರ ತಲಾ ₹10 ಕೋಟಿ ನೀಡಲಾಗಿದೆ. ಉಳಿದ ₹33 ಕೋಟಿಯಲ್ಲಿ ನಗರದ 148 ಕೆರೆಗಳಿಗೆ ತೂಬು ಗೇಟ್‌ಗಳನ್ನು ಅಳವಡಿಸಲು ವಿನಿಯೋಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT