ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತುಲ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು

Last Updated 17 ಫೆಬ್ರುವರಿ 2022, 18:44 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ‘ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ನಾಮಕರಣ ಮಾಡುವ ಪ್ರಸ್ತಾವವನ್ನು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅನುಮೋದಿಸಿದ್ದಾರೆ.

ಈ ರಸ್ತೆಗೆ ‘ಪುನೀತ್‌ ರಾಜ್‌ಕುಮಾರ್‌ ರಸ್ತೆ’ ಎಂದು ನಾಮಕರಣ ಮಾಡಲು 2021ರ ಡಿ. 18ರಂದು ನಡೆದ ಬಿಬಿಎಂಪಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಈ ಬಗ್ಗೆ 2021ರ ಡಿ.29ರಂದು ಪ್ರಕಟಣೆ ನೀಡಿದ್ದ ಬಿಬಿಎಂಪಿ, ಸಲಹೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತ್ತು. 700ಕ್ಕೂ ಹೆಚ್ಚು ಮಂದಿ ಈ ಪ್ರಸ್ತಾವದ ಪರವಾಗಿ ಸಹಿ ಮಾಡಿದ್ದರು. ಈ ರಸ್ತೆಗೆ ‘ಅಂಬರೀಷ್‌ ರಸ್ತೆ’ ಎಂದು ಹೆಸರಿಡುವಂತೆ ‘ಬೆಂಗಳೂರು ಮಹಾನಗರ ಜಿಲ್ಲಾ ಅಂಬರೀಷ್‌ ಅಭಿಮಾನಿಗಳ ಸಂಘ ಮತ್ತು ದೇವರ ಮಗ ಅಭಿಷೇಕ್‌ ಅಂಬರೀಷ್‌ ಟ್ರಸ್ಟ್‌’ಗಳು ಮನವಿ ಸಲ್ಲಿಸಿದ್ದವು. ಈ ರಸ್ತೆಗೆ ಪುನೀತ್‌ ಅವರ ಹೆಸರಿಡಲು ಆಡಳಿತಾಧಿಕಾರಿಯವರು ಬುಧವಾರ ನಡೆದ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ.

ವಿವಿಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಈ ರಸ್ತೆಗೆ ಪುನೀತ್‌ ಅವರ ಹೆಸರಿಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT