ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರದಿಂದ ಕಸ ಸಂಗ್ರಹಕ್ಕೆ ಅಡ್ಡಿಯಾಗಿಲ್ಲ: ಬಿಬಿಎಂಪಿ

Last Updated 2 ಜುಲೈ 2022, 21:54 IST
ಅಕ್ಷರ ಗಾತ್ರ

ಬೆಂಗಳೂರು: ಪೌರಕಾರ್ಮಿಕರ ಮುಷ್ಕರದಿಂದ ಮನೆ ಮನೆ ಕಸ ಸಂಗ್ರಹಕ್ಕೆ ತೊಂದರೆ ಆಗಿಲ್ಲ. ರಸ್ತೆಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸ್ವಲ್ಪ ಅಡ್ಡಿಯಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆಡಳಿತ) ಎಸ್‌.ರಂಗಪ್ಪ ತಿಳಿಸಿದರು.

ಬಿಬಿಎಂಪಿಯಲ್ಲಿ 17,425 ಪೌರ ಕಾರ್ಮಿಕರಿದ್ದು, ಇವರಲ್ಲಿ 13,810 ಕಾರ್ಮಿಕರು ಗೈರುಹಾಜರಾಗಿದ್ದರು. 3,615 ಮಂದಿ ಕೆಲಸ ಮಾಡಿದ್ದಾರೆ. 1,171 ಮೇಲ್ವಿಚಾರಕರಲ್ಲಿ 454 ಜನ ಕೆಲಸ ಮಾಡಿದ್ದಾರೆ. 5,205 ಆಟೊ ಟಿಪ್ಪರ್ ಚಾಲಕರಲ್ಲಿ 250 ಮಂದಿ ಗೈರಾಗಿದ್ದರು. 5,340 ಆಟೊ ಟಿಪ್ಪರ್ ಸಹಾಯಕರಲ್ಲಿ 627 ಮಂದಿ ಗೈರಾಗಿದ್ದು, ಉಳಿದವರು ಕೆಲಸ ಮಾಡಿ
ದ್ದಾರೆ. ಆದ್ದರಿಂದ ಕಸ ನಿರ್ವಹಣೆಗೆ ತೊಂದರೆಯಾಗಿಲ್ಲ ಎಂದು ಹೇಳಿದರು.

‘ಪೌರಕಾರ್ಮಿಕರ ಜತೆ ಪಾಲಿಕೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಪೌರ ಕಾರ್ಮಿಕರ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿರುವುದರಿಂದ ಪಾಲಿಕೆ ಪ್ರತ್ಯೇಕವಾಗಿ ಮಾತುಕತೆ ನಡೆಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT