ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟರ್ಲಿಂಗ್‌ ಮೇಲೆ ಹೆಚ್ಚಿದ ನಿರೀಕ್ಷೆ

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ಲಂಡನ್‌ (ಎಎಫ್‌ಪಿ): ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದ ಮಿಡ್‌ಫೀಲ್ಡರ್‌ ರಹೀಮ್‌ ಸ್ಟರ್ಲಿಂಗ್‌ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ.

ಮ್ಯಾಂಚೆಸ್ಟರ್‌ ಸಿಟಿ ಕ್ಲಬ್‌ನ ಆಟಗಾರರಾಗಿರುವ ಸ್ಟರ್ಲಿಂಗ್‌ ಅವರು ಈ ಬಾರಿಯ ಋತುವಿನಲ್ಲಿ 23 ಗೋಲುಗಳನ್ನು ದಾಖಲಿಸಿದ್ದೇ ಇದಕ್ಕೆ ಕಾರಣ. ಅವರ ಅಮೋಘ ಆಟದ ನೆರವಿನಿಂದ ಮ್ಯಾಂಚೆಸ್ಟರ್‌ ಸಿಟಿ ತಂಡವು ಲೀಗ್‌ ಕಪ್‌ ಪ್ರಶಸ್ತಿ ಗೆದ್ದಿತ್ತು.

ಇತ್ತೀಚಿನ ದಿನಗಳಲ್ಲಿ ಆಟದ ತಂತ್ರಗಾರಿಕೆಯಲ್ಲಿ ಅವರು ಗಳಿಸಿಕೊಂಡಿರುವ ನೈಪುಣ್ಯತೆ ಈ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ನೆರವಾಗಬಹುದು ಎಂದು ತಂಡದ ಕೋಚ್‌ ಗರೆತ್‌ ಸೌತ್‌ಗೇಟ್‌ ಅವರು ಕೆಲ ದಿನಗಳ ಹಿಂದೆ ಹೇಳಿದ್ದರು. ಆದ್ದರಿಂದ ಎದುರಾಳಿ ತಂಡಗಳ ಸಾಮರ್ಥ್ಯಕ್ಕೆ ಸವಾಲು ಹಾಕಲು, ಸ್ಟರ್ಲಿಂಗ್‌ ಅವರನ್ನು ಮಿಢ್‌ಫೀಲ್ಟರ್‌ ಹಾಗೂ ಫಾರ್ವರ್ಡ್‌ ಆಟಗಾರನಾಗಿಯೂ ಬಳಸಿಕೊಳ್ಳಲು ಸೌತ್‌ಗೇಟ್‌ ನಿರ್ಧರಿಸಿದ್ದಾರೆ.

‘ಒಂದು ವರ್ಷದಿಂದ ಸ್ಟರ್ಲಿಂಗ್‌ ಅವರು ಆಟದ ಮೇಲೆ ಸಾಧಿಸಿರುವ ಹಿಡಿತ ನಿಜಕ್ಕೂ ಆಶಾದಾಯಕ. ಪಂದ್ಯದಿಂದ ಪಂದ್ಯಕ್ಕೆ ಅವರು ಅಂಗಳದಲ್ಲಿ ಮಿಂಚುತ್ತಿದ್ದಾರೆ. ಆದರೆ, ವಿಶ್ವಕಪ್‌ನಂತಹ ದೊಡ್ಡ ಮಟ್ಟದ ಟೂರ್ನಿಯಲ್ಲಿ ಸಾಕಷ್ಟು ಪ್ರಬಲವಾದ ಪೈಪೋಟಿ ಇರುತ್ತದೆ. ಸ್ಟರ್ಲಿಂಗ್‌ ಅವರಿಗೆ ಈ ಟೂರ್ನಿ ನಿಜಕ್ಕೂ ಅಗ್ನಿಪರೀಕ್ಷೆ’ ಎಂದು ಮ್ಯಾಂಚೆಸ್ಟರ್‌ ಸಿಟಿ ಕ್ಲಬ್‌ನ ಕೋಚ್‌ ಪೆಪ್‌ ಗಾರ್ದಿಯೊಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT