ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ವಿಂಗಡಣೆ: ಬಿಬಿಎಂಪಿ ವಾರ್ಡ್‌ಗಳು ಕಲಸು ಮೇಲೋಗರ

Last Updated 7 ಮಾರ್ಚ್ 2020, 4:11 IST
ಅಕ್ಷರ ಗಾತ್ರ

ಬೆಂಗಳೂರು: 2011ರ ಜನಸಂಖ್ಯೆ ಆಧರಿಸಿ ಮಾಡಲಾಗಿರುವ ಬಿಬಿಎಂಪಿ ವಾರ್ಡ್‌ ಮರುವಿಂಗಡಣೆಯಲ್ಲಿ ಬಹುತೇಕ ವಾರ್ಡ್‌ಗಳು ಕಲಸು ಮೇಲೋಗರ ಆಗಿವೆ. ಜನಸಂಖ್ಯೆ ಹೆಚ್ಚಿರುವ ವಾರ್ಡ್‌ಗಳ ಗಡಿಗಳನ್ನು ಅದಲು–ಬದಲು ಮಾಡಲಾಗಿದೆ.

ಮರು ವಿಂಗಡಣೆಯ ಕರಡಿನ ಪ್ರಕಾರ ನಗರದ ಹೊರ ವಲಯದ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿದ್ದರೆ, ನಗರದೊಳಗಿನ ಕ್ಷೇತ್ರಗಳಲ್ಲಿ ವಾರ್ಡ್‌ಗಳೇ ಕಣ್ಮರೆಯಾಗಿವೆ.

ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂಬುದರ ವಿವರ ಇಲ್ಲಿದೆ.

ಚೌಡೇಶ್ವರಿಯೊಂದಿಗೆ ಅಟ್ಟೂರು ವಿಲೀನ: ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದಿನಂತೆ ನಾಲ್ಕು ವಾರ್ಡ್‌ಗಳೇ ಉಳಿದಿವೆ.

ಅಟ್ಟೂರು ವಾರ್ಡ್‌ ಬದಲಿಗೆ ಬೆಟ್ಟಹಳ್ಳಿ ವಾರ್ಡ್‌ ಬಂದಿದೆ. ಅಟ್ಟೂರು ವಾರ್ಡ್‌ನಲ್ಲೇ ಅತೀ ಹೆಚ್ಚು 58,219 ಜನಸಂಖ್ಯೆ ಇತ್ತು. ಹೀಗಾಗಿ ಈ ವಾರ್ಡ್‌ನಲ್ಲಿದ್ದ ಕೆಲ ಬಡಾವಣೆಗಳನ್ನು ಚೌಡೇಶ್ವರಿಗೆ ಸೇರಿಸಲಾಗಿದೆ. ಅದರಲ್ಲಿ ಅಟ್ಟೂರು ಗ್ರಾಮ ಚೌಡೇಶ್ವರಿಗೆ ಸೇರಿಕೊಂಡಿದೆ. ಹೀಗಾಗಿ ವಾರ್ಡ್ ಹೆಸರನ್ನು ಅಟ್ಟೂರು ಬದಲಿಗೆ ಬೆಟ್ಟಹಳ್ಳಿ ಎಂದು ಹೆಸರಿಸಲಾಗಿದೆ.

ಚೌಡೇಶ್ವರಿ ವಾರ್ಡ್‌ನ ಕೆಲ ಬಡಾವಣೆ ಗಳನ್ನು ಕೆಂಪೇಗೌಡ ವಾರ್ಡ್‌ಗೆ ಸೇರಿಸಲಾಗಿದೆ. ಯಲಹಂಕ ಉಪನಗರ ವಾರ್ಡ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಹೊರಮಾವು ಮೂರುಭಾಗ: ಕೆ.ಆರ್‌.ಪುರ ಕ್ಷೇತ್ರದಲ್ಲಿ ಇದ್ದ ಒಂಬತ್ತು ವಾರ್ಡ್‌ಗಳನ್ನು 11 ವಾರ್ಡ್‌ಗಳಾಗಿ ವಿಂಗಡಣೆ ಮಾಡಲಾಗಿದೆ. 95,368 ಜನಸಂಖ್ಯೆ ಇದ್ದ ಹೊರಮಾವು ವಾರ್ಡ್‌ ವಿಭಾಗಿಸಿ ಚೆಲ್ಲಕೆರೆ ಮತ್ತು ಕಲ್ಕೆರೆ ವಾರ್ಡ್‌ಗಳನ್ನು ಹುಟ್ಟು ಹಾಕಲಾಗಿದೆ. ಕಲ್ಕೆರೆ ವಾರ್ಡ್‌ಗೆ ರಾಮಮೂರ್ತಿ ನಗರದ ಬಹುತೇಕ ಬಡಾವಣೆಗಳನ್ನೂ ಸೇರಿಸಲಾಗಿದೆ. ರಾಮಮೂರ್ತಿ ನಗರಕ್ಕೆ ಹೊರಮಾವು, ದೇವಸಂದ್ರ, ವಿಜ್ಞಾನಪುರ ವಾರ್ಡ್‌ನ ಕೆಲ ಬಡಾವಣೆಗಳನ್ನು ಸೇರಿಸಲಾಗಿದೆ. ಎ. ನಾರಾಯಣಪುರ, ವಿಜ್ಞಾನನಗರ, ಎಚ್‌ಎಎಲ್ ವಿಮಾನ ನಿಲ್ದಾಣ ವಾರ್ಡ್‌ ಗಳನ್ನು ಹಿಂದಿನಂತೆ ಉಳಿಸಲಾಗಿದೆ. ಒಟ್ಟು ಜನಸಂಖ್ಯೆ 4,47,015 ರಿಂದ 4,59,758ಕ್ಕೆ ಹೆಚ್ಚಳವಾಗಿದೆ.

ಜಕ್ಕೂರು ಚಿತ್ರಣವೇ ಬದಲು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಇದ್ದ 7 ವಾರ್ಡ್‌ಗಳನ್ನು 9 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಜಕ್ಕೂರು ವಾರ್ಡ್‌ನ ಚಿತ್ರಣವೇ ಬದ ಲಾಗಿದೆ.

ಕೋಗಿಲು ಎಂಬ ಹೊಸ ವಾರ್ಡ್‌ ಸೃಷ್ಟಿಸಲಾಗಿದ್ದು, ಅದಕ್ಕೆ ಜಕ್ಕೂರು ವಾರ್ಡ್‌ನಲ್ಲಿದ್ದ ಶೇ 80ರಷ್ಟು ಬಡಾವಣೆಗಳನ್ನು ಬಿಟ್ಟುಕೊಡಲಾಗಿದೆ. ಜಕ್ಕೂರಿಗೆ ಥಣಿಸಂದ್ರ ಮತ್ತು ಬ್ಯಾಟರಾಯನಪುರದ ವಾರ್ಡ್‌ ಗಳನ್ನು ಬಿಟ್ಟುಕೊಡಲಾಗಿದೆ.

ಬ್ಯಾಟರಾಯನಪುರವನ್ನೂ ವಿಭಾಗಿ ಸಲಾಗಿದ್ದು, ಅಮೃತಹಳ್ಳಿ ಮತ್ತು ಗುಂಡಾಜನೇಯ ದೇವಸ್ಥಾನ ವಾರ್ಡ್‌ ಉಗಮವಾಗಿವೆ. ಈ ಹೊಸ ವಾರ್ಡ್‌ಗಳಿಗೆ ಕೊಡಿಗೇಹಳ್ಳಿಯ ಸ್ವಲ್ಪ ಭಾಗವನ್ನೂ ಸೇರಿಸಲಾಗಿದೆ. ವಿದ್ಯಾ ರಣ್ಯಪುರ, ದೊಡ್ಡಬೊಮ್ಮಸಂದ್ರ ವಾರ್ಡ್‌ ಜತೆಗೆ ಕುವೆಂಪುನಗರದ ಕೆಲ ವಾರ್ಡ್‌ಗಳನ್ನು ಅದಲು–ಬದಲು ಮಾಡಲಾಗಿದೆ. ಹೀಗಾಗಿ ಈ ವಾರ್ಡ್‌ಗೆ ಕುವೆಂಪುನಗರದ ಬದಲಿಗೆ ರಾಮಚಂದ್ರಪುರ ವಾರ್ಡ್‌ ಎಂದು ಹೆಸರಿಸಲಾಗಿದೆ.

ಯಶವಂತಪುರವೂ ಛಿದ್ರ: ಯಶವಂತ ಪುರ ಕ್ಷೇತ್ರದಲ್ಲಿ ಇದ್ದ 5 ವಾರ್ಡ್‌ಗಳನ್ನು ಏಳು ವಾರ್ಡ್‌ಗಳನ್ನು ವಿಭಾಗಿಸಲಾಗಿದೆ. ದೊಡ್ಡಬಿದರಕಲ್ಲು ಕ್ಷೇತ್ರವನ್ನು ಎರಡು ಭಾಗ ಮಾಡಲಾಗಿದೆ. ಬ್ಯಾಡರಹಳ್ಳಿ ವಾರ್ಡ್‌ ಹುಟ್ಟುಹಾಕಲಾಗಿದ್ದು, ಇದಕ್ಕೆ ಹೇರೋಹಳ್ಳಿಯ ಕೆಲ ಬಡಾವಣೆ ಗಳನ್ನೂ ಸೇರ್ಪಡೆ ಮಾಡಲಾಗಿದೆ. ಹೇರೋಹಳ್ಳಿ ವಾರ್ಡ್‌ಗೆ ಉಲ್ಲಾಳು ವಾರ್ಡ್‌ನ ಸ್ಪಲ್ಪ ಭಾಗವನ್ನು ಸೇರಿಸಿ ಕೊಳ್ಳಲಾಗಿದೆ. ನಾಗದೇವನಹಳ್ಳಿ ಎಂಬ ಮತ್ತೊಂದು ಹೊಸ ವಾರ್ಡ್‌ ಉಗಮವಾಗಿದ್ದು, ಅದಕ್ಕೆ ಉಲ್ಲಾಳು ಕೆಲ ಬಡಾವಣೆ ಮತ್ತು ಕೆಂಗೇರಿಯ ಕೆಲ ಬಡಾವಣೆಗಳನ್ನು ಸೇರಿಸಲಾಗಿದೆ. ಕೆಂಗೇರಿ ವಾರ್ಡ್‌ಗೆ ಹೆಮ್ಮಿಗೆಪುರದ ಸ್ವಲ್ಪ ಭಾಗ ಸೇರ್ಪಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT