ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದೋರ್‌ ಮಾದರಿಯಲ್ಲಿ ಕಸ ನಿರ್ವಹಣೆ – ಸಜ್ಜಾಗುತ್ತಿದೆ ಪಾಲಿಕೆ

ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ– ಎನ್‌ಜಿಟಿ ಉಸ್ತುವಾರಿ ಸಮಿತಿ ಜೊತೆ ಸಭೆ
Last Updated 21 ಡಿಸೆಂಬರ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಇಂದೋರ್‌ ಮಾದರಿಯ ಕಸ ವಿಲೇವಾರಿ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.ಅದು ಯಶಸ್ವಿಯಾದರೆ, ಹಂತ ಹಂತವಾಗಿ ಎಲ್ಲಾ ವಾರ್ಡ್‌ಗಳಿಗೆ ಈ ವ್ಯವಸ್ಥೆ ವಿಸ್ತರಿಸಲಿದ್ದೇವೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ತಿಳಿಸಿದರು.

ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಗಿರುವ ಪ್ರಗತಿ ಬಗ್ಗೆ ಪರಿಶೀಲಿಸಲುರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವತಿಯಿಂದ ರಚಿಸಲಾದ ರಾಜ್ಯ ಮಟ್ಟದ ಕಸ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ ಸುಭಾಷ್‌ ಬಿ.ಅಡಿ ಅವರ ನೇತೃತ್ವದಲ್ಲಿ ಶನಿವಾರ ನಡೆದ
ಸಭೆಯಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು.

ಇಂದೋರ್ ನಗರದಲ್ಲಿ ಕಸದ ಸಮರ್ಪಕ ವಿಲೇವಾರಿ ಮಾಡುವ ವಿಧಾನವನ್ನು ಹೇಗೆ ಅನುಷ್ಠಾನಗೊಳಿ
ಸಲಾಗುತ್ತಿದೆ ಎಂಬ ಬಗ್ಗೆ ಸಲಹಾ ಸಂಸ್ಥೆಯ ಜಾವೇದ್‌ ವಾರ್ಸಿ ನೇತೃತ್ವದ ತಂಡ ಪ್ರಾತ್ಯಕ್ಷಿಕೆ ನೀಡಿತು.

ಕಸ ವಿಲೇವಾರಿ ಪ್ರಕ್ರಿಯೆ, ಒಂದೇ ವಾಹನದಲ್ಲಿ ಹಸಿ, ಒಣ ಹಾಗೂ ಸ್ಯಾನಿಟರಿ ಕಸಗಳನ್ನು ಪ್ರತ್ಯೇಕವಾಗಿ ಕೊಂಡೊಯ್ಯುವ ಬಗೆ, ತ್ಯಾಜ್ಯ ಸಂಸ್ಕರಣಾ ಘಟಕ, ದ್ರವ ತ್ಯಾಜ್ಯ ಘಟಕಗಳು ಹೇಗಿರಲಿವೆ ಎಂಬ ಬಗ್ಗೆ, ಆಟೊ ಟಿಪ್ಪರ್‌ಗಳಿಗೆ ಜಿ.ಪಿ.ಎಸ್ ಹಾಗೂ ಆರ್.ಎಫ್.ಐ.ಡಿ ಅಳವಡಿಕೆ ಬಗ್ಗೆ, ಕಸ ಗುಡಿಸುವ ಯಂತ್ರಗಳ ಕಾರ್ಯ
ನಿರ್ವಹಣೆ, ಕಸ ವರ್ಗಾಯಿಸುವ ಕೇಂದ್ರಗಳ (ಟ್ರಾನ್ಸ್‌ಫರ್ ಸ್ಟೇಷನ್‌) ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.

‘ರಾಜಕಾಲುವೆಗಳಲ್ಲಿ ಪ್ರತಿ 2 ಕಿ.ಮೀ.ಗೆ ಒಂದು ಸಣ್ಣ ದ್ರವತ್ಯಾಜ್ಯ ಸಂಸ್ಕರಣಾ ಘಟಕ (ಮಿನಿ ಎಸ್‌ಟಿಪಿ) ಅಳವಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ನಿತ್ಯ 10 ಟನ್‌ಗಿಂತ ಹೆಚ್ಚು ಹಸಿ
ಕಸ ಉತ್ಪಾದಿಸುವ ಮಾರುಕಟ್ಟೆಗಳ ಬಳಿ ಬಯೊ– ಮೀಥನೈಸೇಷನ್ಘಟಕ ಸ್ಥಾಪಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು’ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷ ಆಯುಕ್ತರಾದ ರವಿಕುಮಾರ್ ಸುರಪುರ, ವಲಯಗಳ ಜಂಟಿ ಆಯುಕ್ತರಾದ ಪಲ್ಲವಿ, ರಾಮಕೃಷ್ಣ, ಕಸ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್, ರಾಜ್ಯ ಮಾಲಿನ್ಯ ನಿಯಂತ್ರಣ
ಮಂಡಳಿ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT