ಬೆಂಗಳೂರು: ಭವಿಷ್ಯದ ಬೆಂಗಳೂರು ನಗರ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಬೆಂಗಳೂರು ಅಭಿವೃಧಿ ಪ್ರಾಧಿಕಾರ (ಬಿಡಿಎ), ಹೊಸ ಬಡಾವಣೆ, ವಸತಿ ಸಂಕೀರ್ಣ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಹೊಸ ಲಾಂಛನ ವಿನ್ಯಾಸ ಮತ್ತು ಟ್ಯಾಗ್ ಲೈನ್ ಸ್ಪರ್ಧೆ ಏರ್ಪಡಿಸಿದೆ.

ಬಿಡಿಎ ಲೇಔಟ್, ವಸತಿ ಸಂಕೀರ್ಣ, ವೆಬ್ ಸೈಟ್, ನಾಮಫಲಕ ಮತ್ತು ಅಧಿಕೃತ ಕಾಗದ ಪತ್ರಗಳಲ್ಲಿ ಈ ವಿಜೇತ ಲಾಂಛನ, ಟ್ಯಾಗ್ ಲೈನ್ ರಾರಾಜಿಸಲಿದೆ.

ಅತ್ಯುತ್ತಮ ಲಾಂಛನ ವಿನ್ಯಾಸ ಮತ್ತು ಟ್ಯಾಗ್ ಲೈನ್ ವಿಜೇತರು ₹1 ಲಕ್ಷ ನಗದು ಬಹುಮಾನ ಪಡೆಯಲಿದ್ದು (ಟಿಡಿಎಸ್ ಷರತ್ತಿಗೆ ಒಳಪಟ್ಟು), 18 ವರ್ಷ ಮೇಲ್ಪಟ್ಟ ಕನ್ನಡಿಗರು ಇದರಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು, ಹವ್ಯಾಸಿ ವಿನ್ಯಾಸಕರು, ವೃತ್ತಿಪರರು, ಸೃಜನಾತ್ಮಕ ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಬ್ಬರು ಒಂದು ಲಾಂಛನ, ಒಂದು ಟ್ಯಾಗ್ ಲೈನ್ ಮಾತ್ರ ಸಲ್ಲಿಸಬಹುದು. ಕನ್ನಡ, ಇಂಗ್ಲಿಷ್ ಅಥವಾ ಎರಡೂ ಭಾಷೆಗಳಲ್ಲಿ ಟ್ಯಾಗ್ ಲೈನ್ ಗಳಿರಬಹುದು.

ಅತ್ಯುನ್ನತ ಗುಣಮಟ್ಟದ ಜೆಪಿಇಜಿ, ಪಿಎನ್ಜಿ, ಪಿಡಿಎಫ್ನಲ್ಲಿ ಲಾಂಛನ ಸಲ್ಲಿಸಬೇಕಾಗಿದ್ದು, ಯೋಜಿತ ನಗರಾಭಿವೃದ್ಧಿ ಮತ್ತು ಸ್ಮಾರ್ಟ್ ಸಿಟಿಯನ್ನು ಲಾಂಛನ ಪ್ರತಿಬಿಂಬಿಸಬೇಕು. ಲಾಂಛನ ಯಾವುದೇ ಟ್ರೇಡ್ ಮಾರ್ಕ್, ಕೃತಿ ಸ್ವಾಮ್ಯತೆಯನ್ನು ಉಲ್ಲಂಘಿಸಬಾರದು.

ಟ್ಯಾಗ್ ಲೈನ್ಗಳು ಬಿಡಿಎ ಗುರಿ ಮತ್ತು ಉದ್ದೇಶವನ್ನು ಚಿಕ್ಕದಾಗಿ, ಸ್ಪಷ್ಟವಾಗಿ ಪ್ರತಿಬಿಂಬಿಸಬೇಕು. ಸ್ವಂತಿಕೆಯನ್ನು ಹೊಂದಿರಬೇಕು. ಟ್ಯಾಗ್ ಲೈನ್ಗಳು ಓದಲು ಸುಲಭವಾಗಿದ್ದು, 8 ಪದಗಳನ್ನು ಮೀರದಂತೆ ಸಾರ್ವಜನಿಕ ಸಂವಹನಕ್ಕಾಗಿ ಸೂಕ್ತವಾಗಿಬೇಕು. ಎಐ ಮುಖಾಂತರ ಸೃಷ್ಟಿಸಿದ್ದು ಮತ್ತು ನಕಲು ಮಾಡಿರುವುದು ಸ್ಪರ್ಧೆಗೆ ಅನರ್ಹವಾಗಿರುತ್ತವೆ.

https://bdakarnataka.in/ ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರ ಸಲ್ಲಿಸಬೇಕಾಗಿದ್ದು, ಪ್ರವೇಶಪತ್ರ ಸಲ್ಲಿಸಲು ಮಾರ್ಚ್ 24 ಕೊನೆ ದಿನ.

ಮಾಹಿತಿಗೆ ಇ ಮೇಲ್- bdacontests@gmail.com, ಸಹಾಯವಾಣಿ 94831 66622 (24x7), ವಾಟ್ಸ್ ಆ್ಯಪ್ –94831 66622 ಸಂಪರ್ಕಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.