ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎಯಿಂದ ಒತ್ತುವರಿ ತೆರವು: ₹65 ಕೋಟಿ ಮೌಲ್ಯದ ಆಸ್ತಿ ವಶಕ್ಕೆ

Last Updated 21 ಫೆಬ್ರುವರಿ 2023, 3:54 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ. ನಗರ 9ನೇ ಹಂತದಲ್ಲಿ ಅತಿಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್‌ ತೆರವುಗೊಳಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸುಮಾರು ₹65 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಜೆ.ಪಿ.ನಗರ 9ನೇ ಹಂತ 4ನೇ ಬ್ಲಾಕ್‌ನ ತಿಪ್ಪಸಂದ್ರದ ಸರ್ವೆ ನಂ.10ರಲ್ಲಿ 1 ಎಕರೆ 10 ಗುಂಟೆ ಒತ್ತುವರಿ ಪ್ರದೇಶವನ್ನು ಬಿಡಿಎ ಆಯುಕ್ತ ಜಿ. ಕುಮಾರ್‌ನಾಯಕ್‌ ಸೂಚನೆ ಮೇರೆಗೆ ಕಾರ್ಯಪಡೆ ಕಾರ್ಯಾಚರಣೆ ನಡೆಸಿ ಸೋಮವಾರ ವಶಕ್ಕೆ ಪಡೆಯಿತು. ಬಿಡಿಎ ಎಸ್ಪಿ ನಂಜುಂಡೇಗೌಡ, ಕಾರ್ಯಪಾಲಕ ಎಂಜಿನಿಯರ್‌ ಸುರೇಶ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT