ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ವಿವಿಧೆಡೆ ಕೈಗೆತ್ತಿಕೊಂಡಿರುವ ವಸತಿ ಯೋಜನೆಗಳಿಗೆ ₹3,747 ಕೋಟಿ ಹೂಡಿಕೆ ಮಾಡಿದ್ದು, ಅಂದಾಜು 4,251 ಫ್ಲ್ಯಾಟ್ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಕೋನದಾಸಪುರ, ವಳಗೇರಹಳ್ಳಿ, ಕಾಳತಮ್ಮನಹಳ್ಳಿ, ಕೆಂಚನಪುರ ಮತ್ತು ದೊಡ್ಡತೋಗೂರು ಪ್ರದೇಶಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ.

ಬಿದರಹಳ್ಳಿ ಹೋಬಳಿಯ ಕೋನದಾಸಪುರ ಹಂತ ಒಂದು ವಸತಿ ಯೋಜನೆಯಲ್ಲಿ 1,928 ಫ್ಲ್ಯಾಟ್ಗಳನ್ನು ನಿರ್ಮಿಸುತ್ತಿದ್ದು, ಇದರಲ್ಲಿ 480– ಒಂದು ಬಿಎಚ್ಕೆ ಮತ್ತು 1,448– ಮೂರು ಬಿಎಚ್ಕೆ ಸೇರಿವೆ.

ಕೋನದಾಸಪುರ ಹಂತ 3 ರಲ್ಲಿ ಒಟ್ಟು 532 ಫ್ಲ್ಯಾಟ್ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, 336– ಎರಡು ಬಿಎಚ್ಕೆ, 112– ಮೂರು ಬಿಎಚ್ಕೆ ಸೇರಿವೆ. ವಳಗೇರಹಳ್ಳಿಯಲ್ಲಿ 7ನೇ ಹಂತದ ವಸತಿ ಯೋಜನೆಯಲ್ಲಿ 200 ಫ್ಲ್ಯಾಟ್ಗಳು ನಿರ್ಮಾಣವಾಗುತ್ತಿವೆ. ಈ ಪೈಕಿ 100– ಎರಡು ಬಿಎಚ್ಕೆ ಮತ್ತು 100– ಎರಡು ಬಿಎಚ್ಕೆ ಸೇರಿವೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ವ್ಯಾಪ್ತಿಯಲ್ಲಿರುವ ಕೆಂಚನಪುರ ಗ್ರಾಮದಲ್ಲಿ 210– ಎರಡು ಬಿಎಚ್ಕೆ ಮತ್ತು 153– ಮೂರು ಬಿಎಚ್ಕೆ ಒಳಗೊಂಡ 363 ಫ್ಲ್ಯಾಟ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಹೆಸರಘಟ್ಟದ ಕಾಳತಮ್ಮನಹಳ್ಳಿಯಲ್ಲಿ ಮತ್ತೊಂದು ಪ್ರಮುಖ ವಸತಿ ಯೋಜನೆ ಕೈಗೆತ್ತಿಕೊಂಡಿದ್ದು, 264– ಮೂರು ಬಿಎಚ್ಕೆ ಮತ್ತು 132– ನಾಲ್ಕು ಬಿಎಚ್ಕೆ ಸೇರಿದಂತೆ 396 ಫ್ಲ್ಯಾಟ್ಗಳನ್ನು ನಿರ್ಮಿಸಲು ಯೋಜಿಸಿದೆ.

ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ದೊಡ್ಡತೋಗೂರುನಲ್ಲಿ ಬೃಹತ್ ಯೋಜನೆ ಕೈಗೆತ್ತಿಕೊಂಡಿರುವ ಪ್ರಾಧಿಕಾರ, 832 ಫ್ಲ್ಯಾಟ್ಗಳನ್ನು ನಿರ್ಮಿಸಲು ಯೋಜಿಸಿದೆ. ಇದರಲ್ಲಿ 416– ಮೂರು ಬಿಎಚ್ಕೆ ಮತ್ತು 416– ನಾಲ್ಕು ಬಿಎಚ್ಕೆ ಸೇರಿವೆ.

‘ಯೋಜನೆ ಮುಕ್ತಾಯ ಬಳಿಕ ಎಲ್ಲಾ ಖರ್ಚು ಹಾಗೂ ಭೂಮಿಯ ಬೆಲೆ ಸಹಿತ ಲೆಕ್ಕಾಚಾರ ಮಾಡಿ ದರಗಳನ್ನು ನಿರ್ಧರಿಸಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗುತ್ತಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.