ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: 3 ಎಕರೆ 29 ಗುಂಟೆ ಜಾಗ ಮರುವಶ

ರಾಜಾಜಿನಗರದಲ್ಲಿ 2 ಎಕರೆ 20 ಗುಂಟೆ, ಕೆಂಪಾಪುರ ಅಗ್ರಹಾರದಲ್ಲಿ 1 ಎಕರೆ 9 ಗುಂಟೆ ಒತ್ತುವರಿ ತೆರವು
Last Updated 4 ಜನವರಿ 2022, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೂರು ದಿನಗಳಲ್ಲಿ ಎರಡು ಪ್ರಮುಖ ಬಡಾವಣೆಗಳಲ್ಲಿ ಒಟ್ಟು 3 ಎಕರೆ 29 ಗುಂಟೆಗಳಷ್ಟು ಒತ್ತುವರಿ ತೆರವುಗೊಳಿಸಿದೆ. ಪ್ರಾಧಿಕಾರವು ಮರುಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಮೌಲ್ಯ ₹ 300 ಕೋಟಿ ಎಂದು ಅಂದಾಜಿಸಲಾಗಿದೆ.

ರಾಜಾಜಿನಗರ ಆರನೇ ಹಂತದ ಪ್ರಸನ್ನ ಚಿತ್ರಮಂದಿರದ ಬಳಿ ಬಿಡಿಎ ಹೊಂದಿದ್ದ 2 ಎಕರೆ 20 ಗುಂಟೆ ಜಾಗದಲ್ಲಿ 5 ತಾತ್ಕಾಲಿಕ ಶೆಡ್‌ಗಳು ಮತ್ತು 1 ಗ್ಯಾರೇಜ್ ನಿರ್ಮಿಸಲಾಗಿತ್ತು. ಹಲವು ಬಾರಿ ನೋಟಿಸ್ ನೀಡಿದ್ದರೂ ತೆರವು ಮಾಡಿರಲಿಲ್ಲ. ಬಿಡಿಎ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಿ, ಜಾಗವನ್ನುಮಂಗಳವಾರ ಸ್ವಾಧೀನಕ್ಕೆ ಪಡೆದರು. ತೆರವು ಕಾರ್ಯಾಚರಣೆಗೆ ಐದು ಜೆಸಿಬಿಗಳನ್ನು ಬಳಸಲಾಯಿತು. 50ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದರು. ತೆರವುಗೊಳಿಸಲಾದ ಜಾಗದ ಅಂದಾಜು ಮೌಲ್ಯ ₹ 175 ಕೋಟಿ ಎಂದು ಬಿಡಿಎ ತಿಳಿಸಿದೆ.

ವಿಜಯನಗರದ ಅತ್ತಿಗುಪ್ಪೆಯ ಕೆಂಪಾಪುರ ಅಗ್ರಹಾರದಲ್ಲಿ ಬಿಡಿಎಗೆ ಸೇರಿದ ಜಾಗದಲ್ಲಿ (ಸರ್ವೇ ನಂಬರ್ 329/3) ಅಕ್ರಮವಾಗಿ ನಿರ್ಮಿಸಲಾಗಿದ್ದ ಪೆಟ್ರೋಲ್ ಬಂಕ್ ಅನ್ನು ತೆರವುಗೊಳಿಸಲಾಗಿದೆ. ಇಲ್ಲಿದ್ದ ಖಾಲಿ ಜಾಗವೂ ಸೇರಿ ಒಟ್ಟು 1 ಎಕರೆ 9 ಗುಂಟೆ ಜಾಗವನ್ನು ಬಿಡಿಎ ವಶಪಡಿಸಿಕೊಂಡಿದೆ.

‘ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರು ಮಾಲೀಕತ್ವಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ಅವರ ಪರವಾಗಿ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು. ಅಂತಿಮ ತೀರ್ಪು ಬಿಡಿಎ ಪರವಾಗಿ ಬಂದಿತ್ತು. ಹಾಗಾಗಿ ಈ ಜಾಗವನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ. ಈ ಜಾಗದ ಅಂದಾಜು ಮೌಲ್ಯ ₹ 125 ಕೋಟಿ’ ಎಂದು ಬಿಡಿಎ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT