ಬುಧವಾರ, ಆಗಸ್ಟ್ 17, 2022
26 °C

ಬಿಡಿಎ ಅಕ್ರಮ ದಾಖಲೆ ಸೃಷ್ಟಿ ಪ್ರಕರಣ: ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿವೇಶನದಾರರಿಗೆ ನೀಡುವ ಹಂಚಿಕೆ ಪತ್ರ, ಸ್ವಾಧೀನ ಪತ್ರ, ಖಚಿತ ಅಳತೆ ವರದಿ ಮುಂತಾದ ದಾಖಲೆಗಳನ್ನು ಅಕ್ರಮವಾಗಿ ರೂಪಿಸುತ್ತಿದ್ದ ಸಂಚಿನಲ್ಲಿ ಭಾಗಿಯಾದ ಆರೋಪಿಗಳನ್ನು ಶೇಷಾದ್ರಿಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಿಡಿಎ ಉಪಕಾರ್ಯದರ್ಶಿ ಶಿವೇಗೌಡ (ಕೆಎಎಸ್‌ ಅಧಿಕಾರಿ), ಅವರ ಕಚೇರಿಯ ಮೇಲ್ವಿಚಾರಕಿ ಕಮಲಮ್ಮ, ವಿಷಯ ನಿರ್ವಾಹಕ ಸಿಬ್ಬಂದಿ ಸಂಪತ್‌ ಹಾಗೂ ‘ರೇಧನ್‌  ದಿ ಸಿನಿಮಾ ಪೀಪಲ್‌’ನ ಇಂದ್ರ ಕುಮಾರ್‌ ಹಾಗೂ ಅವರ ಕಚೇರಿ ಸಿಬ್ಬಂದಿ ರಾಜು ಬಂಧಿತರು.

ಇಂದ್ರ ಕುಮಾರ್‌ ಹಾಗೂ ಶಿವೇಗೌಡ ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಿಡಿಎ ಎಸ್ಟೇಟ್ಸ್‌ ವಿಬಾಗದ ಪ್ರಥಮ ದರ್ಜೆ ಸಹಾಯಕಿ ಪವಿತ್ರಾ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಅವರನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿ ಇಂದ್ರ ಕುಮಾರ್‌ ಅವರ ‘ರೇಧನ್‌ ದಿ ಸಿನಿಮಾ ಪೀಪಲ್‌’ ಕಚೇರಿಯಲ್ಲಿ ಬಿಡಿಎ ನಕಲಿ ದಾಖಲೆ ಸೃಷ್ಟಿಸಲಾಗುತ್ತಿತ್ತು. ಈ ಕಚೇರಿಗೆ ಪೊಲೀಸ್‌ ಹಾಗೂ ಬಿಡಿಎ ಜಾಗೃತ ದಳದವರು ಶುಕ್ರವಾರ ದಾಳಿ ನಡೆಸಿ, ನಕಲಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು