ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಗ್ರೂಪ್ ‘ಸಿ’ ಮತ್ತು ‘ಡಿ’ವರ್ಗದ ನೌಕರರಿಗೆ ಮೀಸಲಾಗಿದ್ದ ಬಡಾವಣೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಪಡೆದ ಖಾಸಗಿ ವ್ಯಕ್ತಿಗಳ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಡಿಎ ಜಾಗೃತ ದಳದ ಡಿವೈಎಸ್ಪಿ ಬಿ.ಹನುಮಂತರಾಯ ಅವರ ದೂರಿನ ಮೇರೆಗೆ ಲಿಂಗಧೀರನಹಳ್ಳಿ ನಿವಾಸಿ ಎಚ್.ನಾಗರಾಜ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಬಿಡಿಎ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದೊಡ್ಡ ಕಲ್ಲಸಂದ್ರ ಮತ್ತು ಲಿಂಗಧೀರನಹಳ್ಳಿ ಬಡಾವಣೆಗಳಲ್ಲಿ ಪ್ರಾಧಿಕಾರದ ಕೆಳ ಹಂತದ ನೌಕರರಿಗಾಗಿ ನಿವೇಶನಗಳನ್ನು ಮೀಸಲಿಡಲಾಗಿತ್ತು. ಇಲ್ಲಿನ ಎಂಕೆಎಸ್ 2ನೇ ಹಂತದ ಬಡಾವಣೆಯಲ್ಲಿರುವ ನಿವೇಶನ ಸಂಖ್ಯೆ 04 (9.14X12.19 ಅಳತೆ) ಅನ್ನು ನಾಗರಾಜ್ ಎಂಬುವವರು ತಾವು ಬಿಡಿಎ ನೌಕರ ಎಂದು ಸುಳ್ಳು ದಾಖಲೆ ನೀಡಿ ನಿವೇಶನ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಚ್.ನಾಗರಾಜ್ ಮತ್ತು ಇತರರು ಸುಳ್ಳು ದಾಖಲೆ ಸೃಷ್ಟಿಸಿ ತಾವೂ ನೌಕರರೆಂದು ಬಿಂಬಿಸಿ ನಿವೇಶನ ಪಡೆದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ. ಈ ಕಾರ್ಯಕ್ಕೆ ಪ್ರಾಧಿಕಾರದ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ಹಾಗೂ ಒಳಸಂಚು ಇರುವುದು ದಾಖಲೆಗಳ ಪರಿಶೀಲನೆಯಿಂದ ತಿಳಿದುಬಂದಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಕಬಳಿಸಿರುವ ನಾಗರಾಜ್ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಂದು ದೂರಿನಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.