‘ಹಣ ಪಾವತಿ ಅಗತ್ಯ ಇಲ್ಲ’

7
ತಾಯಿ ಮಗನಿಗೆ ಬದಲಿ ನಿವೇಶನ

‘ಹಣ ಪಾವತಿ ಅಗತ್ಯ ಇಲ್ಲ’

Published:
Updated:

ಬೆಂಗಳೂರು: ತಾಯಿ–ಮಗನಿಗೆ 13 ಬದಲಿ ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಅವರು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ ವರದಿ ಸಲ್ಲಿಸಿದ್ದಾರೆ.

‘ಪ್ರಾಧಿಕಾರದ ನಿಯಮಾವಳಿ ಪ್ರಕಾರ ಎಪಿಎಂಸಿಯವರು ಉದ್ದೇಶಿತ ಜಮೀನಿನ ಸಂಬಂಧ 1978ರಲ್ಲಿಯೇ ಹಣ ಪಾವತಿಸಿದ್ದಾರೆ. ಈಗ ಮತ್ತೊಮ್ಮೆ ಹಣ ಪಾವತಿ ಮಾಡುವ ಅಗತ್ಯ ಇಲ್ಲ. ಈ ಪ್ರಕರಣದಲ್ಲಿ ಯಾವುದೇ ರೀತಿಯ ಲೋಪದೋಷಗಳು ಆಗಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

₹10.24 ಕೋಟಿ ನಿವೇಶನ ಮೊತ್ತವನ್ನು ಪಾವತಿಸಿಕೊಳ್ಳದೆಯೇ ತಾಯಿ ಮತ್ತು ಮಗನಿಗೆ 13 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಇಬ್ಬರು ನೌಕರರ ವಿರುದ್ಧ ಬಿಎಂಟಿಎಫ್‌ನಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

‘ನಿವೇಶನ ಮೊತ್ತ ಪಾವತಿಸಿಕೊಳ್ಳದೆ ಕ್ರಯಪತ್ರ ಹಾಗೂ ಸ್ವಾಧೀನಪತ್ರ ನೀಡಿ ಆರ್ಥಿಕ ನಷ್ಟ ಉಂಟು ಮಾಡಿದ್ದೀರಿ ಹಾಗೂ ಕರ್ತವ್ಯ ಲೋಪ ಎಸಗಿದ್ದೀರಿ. ನಿಮ್ಮ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಏಕೆ ದಾಖಲಿಸಬಾರದು? ಮೂರು ದಿನಗಳಲ್ಲಿ ಉತ್ತರ ನೀಡದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪ್ರಾಧಿಕಾರವು ಇಬ್ಬರು ನೌಕರರಿಗೆ ನೋಟಿಸ್‌ ನೀಡಿತ್ತು.

ಬಳಿಕ ಅವರಿಬ್ಬರನ್ನು ಜುಲೈನಲ್ಲಿ ಅಮಾನತು ಮಾಡಿತ್ತು. ಇಲಾಖಾ ವಿಚಾರಣೆ ಕಾಯ್ದಿರಿಸಿ ಉಪ ಕಾರ್ಯದರ್ಶಿ–4 ವಿಭಾಗದ ಪ್ರಥಮದರ್ಜೆ ಸಹಾಯಕ ಬಿ.ವೆಂಕಟ ರಮಣಪ್ಪ ಅವರ ಅಮಾನತನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !