ಬೆಂಗಳೂರು: ನಗರ ಸಂಪರ್ಕಿಸುವ ಆರು ರಾಷ್ಟ್ರೀಯ ಹೆದ್ದಾರಿ ಹಾಗೂ ಎರಡು ರಾಜ್ಯ ಹೆದ್ದಾರಿಗಳಲ್ಲಿ ಅತ್ಯಾಧುನಿಕ ಸ್ವಾಗತ ಕಮಾನು ನಿರ್ಮಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಣಿವಣ್ಣನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಿಡಿಎಯ ವಿವಿಧ ಯೋಜನೆಗಳ ಪರಿಶೀಲನಾ ಸಭೆಯನ್ನು ಬುಧವಾರ ನಡೆಸಿದ ಅವರು, ಬಿಡಿಎ ಗಡಿಯಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಬೇಕು. ಸೂಕ್ತ ಜಾಗವನ್ನು ಗುರುತಿಸಿ, ರಸ್ತೆ ವಿಸ್ತರಣೆ ಹಾಗೂ ದೂರದೃಷ್ಟಿಯಿಂದ ಕಮಾನನ್ನು ನಿರ್ಮಿಸಬೇಕು. ನಗರಕ್ಕೆ ಪ್ರವೇಶಿಸುವವರಿಗೆ ಇದೊಂದು ಆಕರ್ಷಕ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಹೇಳಿದರು.

ವರ್ತೂರು ಹಾಗೂ ಬೆಳ್ಳಂದೂರು ಕೆರೆ ಹೂಳು ಎತ್ತುವುದು ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸ್ಥಳೀಯರು ಹಾಗೂ ಐಐಎಸ್ಸಿ ವಿಜ್ಞಾನಿಗಳೊಂದಿಗೆ ಮಣಿವಣ್ಣನ್ ಮಾತುಕತೆ ನಡೆಸಿದರು.

ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಪುನಶ್ಚೇತನಕ್ಕೆ ಸಂಬಂಧಿಸಿದ ಯೋಜನೆಯ ಪ್ರಗತಿ, ಹಣಕಾಸಿನ ವೆಚ್ಚ, ತಾಂತ್ರಿಕ ವರದಿಗಳು ಮತ್ತು ಮಾಸಿಕ ಸ್ಥಿತಿಗತಿಗಳನ್ನು ಪ್ರಕಟಿಸಲು ಬಿಡಿಎ ವತಿಯಿಂದ ಒಂದು ಪ್ರತ್ಯೇಕ ವೆಬ್ಸೈಟ್ ಅಭಿವೃದ್ಧಿಪಡಿಸಲಾಗುವುದು ಎಂದು ಮಣಿವಣ್ಣನ್ ತಿಳಿಸಿದರು.

ಕೆರೆ ಪುನಶ್ಚೇತನ ಕಾಮಗಾರಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತಿ ತಿಂಗಳು ಸ್ಥಿತಿಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು. ಪ್ರತಿ ಎರಡು ತಿಂಗಳಿಗೊಮ್ಮೆ ಸಮಗ್ರ ಪಾಲುದಾರರ ಸಭೆಗಳನ್ನು ನಡೆಸಲಾಗುವುದು. ಏಪ್ರಿಲ್ ಎರಡನೇ ಬುಧವಾರ ಎರಡೂ ಕೆರೆಗಳ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ವರ್ತೂರು ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಸಂಬಂಧಿಸಿದಂತೆ ಒಂಬತ್ತು ಗುತ್ತಿಗೆದಾರರ ಬಿಲ್ಗಳನ್ನು ಪ್ರಕ್ರಿಯೆಗೊಳಿಸಿ ಪಾವತಿಸಲಾಗಿದೆ ಎಂದು ಬಿಡಿಎ ತಿಳಿಸಿದೆ. ತೆಗೆದುಹಾಕಲಾದ ಹೂಳಿನ ಪ್ರಮಾಣ, ಹೂಳೆತ್ತಿದ ಸ್ಥಳಗಳು ಮತ್ತು ವಿಲೇವಾರಿ ಮಾಡಿದ ಸ್ಥಳಗಳ ವಿವರಗಳನ್ನು ಬಹಿರಂಗಪಡಿಸುವಂತೆ ಸಭೆಯಲ್ಲಿದ್ದ ನಾಗರಿಕ ಪ್ರತಿನಿಧಿ ಜಗದೀಶ್ ರೆಡ್ಡಿ ಕೇಳಿದರು.

ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ಸುತ್ತಲೂ ಹಾನಿಯಾಗಿರುವ ಬೇಲಿಯನ್ನು ತಕ್ಷಣವೇ ದುರಸ್ತಿ ಮಾಡಬೇಕು. ಬೇಲಿ ಇಲ್ಲದ ಭಾಗಗಳನ್ನು ಮರು ಸಮೀಕ್ಷೆ ಮಾಡಿ, ಬೇಲಿ ಹಾಕುವ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಮೇಲ್ವಿಚಾರಣೆ, ನಿರ್ವಹಣೆ ಮತ್ತು ತುರ್ತು ಪ್ರವೇಶಕ್ಕಾಗಿ ಕೆರೆಯ ಸುತ್ತಳತೆಯಲ್ಲಿ ಐದು ಪ್ರವೇಶ ದ್ವಾರಗಳನ್ನು ನಿರ್ವಹಿಸಲಾಗುವುದು. ಕೆರೆಗೆ ಕೊಳಚೆ ನೀರು, ಹೂಳು ಮತ್ತು ಕಸ ಸೇರುವುದನ್ನು ತಡೆಯಲು ಪ್ರಸ್ತುತ ಇರುವ ಒಳಹರಿವಿನ ವಿನ್ಯಾಸಗಳನ್ನು ತಾಂತ್ರಿಕವಾಗಿ ಮರುಪರಿಶೀಲಿಸಲಾಗುವುದು ಎಂದು ಮಣಿವಣ್ಣನ್ ಭರವಸೆ ನೀಡಿದರು.

ಐಐಎಸ್ಸಿಯ ಪ್ರೊ. ಟಿ.ವಿ. ರಾಮಚಂದ್ರ, ನಾಗರಿಕ ಪ್ರತಿನಿಧಿಗಳಾದ ಝಬಿ ಜಮಾಲ್, ನಿತ್ಯಾ ರಾಮಕೃಷ್ಣನ್, ಎಳಗೋವನ್, ವೆಂಕಟೇಶ್, ಬಿಡಿಎ ಸದಸ್ಯ ಎಂಜಿನಿಯರ್ ಶಾಂತ ರಾಜಣ್ಣ ಉಪಸ್ಥಿತರಿದ್ದರು.

ಎಲ್ಲೆಲ್ಲಿ ಸ್ವಾಗತ ಕಮಾನು?

ಮೈಸೂರು ರಸ್ತೆ

ಕನಕಪುರ ರಸ್ತೆ

ತುಮಕೂರು ರಸ್ತೆ

ಬಳ್ಳಾರಿ ರಸ್ತೆ

ಹಳೇ ಮದ್ರಾಸ್ ರಸ್ತೆ

ಹೊಸೂರು ರಸ್ತೆ

ಬನ್ನೇರುಘಟ್ಟ ರಸ್ತೆ

ದೊಡ್ಡಬಳ್ಳಾಪುರ ರಸ್ತೆ.

10 ಕ್ರೀಡಾ ಕೇಂದ್ರ

ಬಿಡಿಎ ಪ್ರದೇಶಗಳಲ್ಲಿ 10 ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಇದ್ದು ಇದನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಇಂದಿರಾನಗರ ಕೆ.ಆರ್. ಮಾರುಕಟ್ಟೆ ಮಲ್ಲೇಶ್ವರ ಸೇರಿದಂತೆ ವಿವಿಧೆಡೆ ಇರುವ ಬಿಡಿಎ ಮಾರುಕಟ್ಟೆಗಳನ್ನು ಮೇಲ್ದರ್ಜೆಗೇರಿಸಬೇಕು. ಹೆಬ್ಬಾಳ ಜಂಕ್ಷನ್ ಮೇಲ್ಸೇತುವೆ ಸೌಂದರ್ಯೀಕರಣ ಕಾರ್ಯ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಮಣಿವಣ್ಣನ್ ಸೂಚಿಸಿದರು. ವಸತಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಂಠೀರವ ಸ್ಟೇಡಿಯಂ ಬಳಿಯ ಅಂಡರ್ಪಾಸ್ ಕಾಮಗಾರಿಗಳಿಗೆ ವೇಗ ನೀಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.