ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನು ನೋವು ನಿವಾರಕ ಬೆಲ್ಟ್‌ನಲ್ಲಿ ₹58.94 ಲಕ್ಷ ಮೌಲ್ಯದ ಚಿನ್ನ

Last Updated 9 ಮಾರ್ಚ್ 2021, 20:38 IST
ಅಕ್ಷರ ಗಾತ್ರ

ಬೆಂಗಳೂರು: ಬೆನ್ನು ನೋವು ನಿವಾರಕ ಬೆಲ್ಟ್‌ನಲ್ಲಿ ಅಕ್ರಮವಾಗಿ ಬಚ್ಚಿಟ್ಟು ಸಾಗಿಸುತ್ತಿದ್ದ ₹ 58.94 ಲಕ್ಷ ಮೌಲ್ಯದ ಚಿನ್ನವನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ದುಬೈನಿಂದ ನಗರದ ನಿಲ್ದಾಣಕ್ಕೆ ಮಾ. 8ರಂದು ಬಂದಿಳಿದಿದ್ದ ತಮಿಳುನಾಡಿನ 34 ವರ್ಷದ ಮಹಿಳೆ ಬಳಿ ಬೆಲ್ಟ್ ಇತ್ತು. ಆಕೆಯ ನಡೆಯಿಂದ ಅನುಮಾನಗೊಂಡ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಅವಾಗಲೇ ಚಿನ್ನ ಪತ್ತೆಯಾಯಿತು’ ಎಂದು ಮೂಲಗಳು ಹೇಳಿವೆ.

‘ಚಿನ್ನವನ್ನು ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು, ಬೆಲ್ಟ್‌ಗೆ ಜೋಡಿಸಿ ಹೊಲಿಗೆ ಹಾಕಲಾಗಿತ್ತು. ಬೆಲ್ಟ್‌ ಕತ್ತರಿಸಿ ಚಿನ್ನವನ್ನು ಹೊರಗೆ ತೆಗೆಯಲಾಯಿತು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT