ಬೆಂಗಳೂರು: ಉತ್ತರ ನಗರ ಪಾಲಿಕೆಯ ಪ್ರತಿಯೊಂದು ವಾರ್ಡ್ನಲ್ಲೂ ತಲಾ 10 ಕಿ.ಮೀ. ಸ್ವಚ್ಛವಾದ, ಅಡೆತಡೆಇಲ್ಲದ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕು ಎಂದು ಆಯುಕ್ತ ಪೊಮ್ಮಲ ಸುನಿಲ್ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಉತ್ತರ ನಗರ ಪಾಲಿಕೆಯ ‘ಬಜೆಟ್ನಿಂದ ಕ್ರಿಯಾಯೋಜನೆ’ ಕಾರ್ಯಾಗಾರ ಹಾಗೂ ಕರಡು ಕ್ರಿಯಾಯೋಜನೆಗಳ ಸಮಗ್ರ ಪರಿಶೀಲನೆ ಸಭೆಯಲ್ಲಿ ಬುಧವಾರ ಅವರು ಮಾತನಾಡಿದರು.

ಸಭೆಯಲ್ಲಿ ವಿವಿಧ ಸಂಘ–ಸಂಸ್ಥೆಗಳು ತಮ್ಮ ಪ್ರಾಜೆಕ್ಟ್ ಪ್ರಸ್ತಾವನೆಗಳು, ಕಾರ್ಯಯೋಜನೆಗಳು ಹಾಗೂ ವೆಚ್ಚ ಅಂದಾಜುಗಳನ್ನು ಮಂಡಿಸಿದವು. ಡಬ್ಲ್ಯುಆರ್ಐ– ಇಂಡಿಯಾ ನೇತೃತ್ವದಲ್ಲಿ ವಾಕಲೂರು, ಬಯೋಮಿ, ವೆಲ್ ಲ್ಯಾಬ್, ಸಿ40 ಸಿಟೀಸ್, ಹಸಿರು ದಳ, ಸಿಜಿಬಿಎಂಟಿ, ಸೇ ಟ್ರೀಸ್, ಬಿಪ್ಯಾಕ್ ಹಾಗೂ ಜನ್ ಸಾಹಸ್ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ವಿವಿಧ ವಿಷಯಗಳ ಕುರಿತು ತಮ್ಮ ಸಲಹೆಗಳನ್ನು ನೀಡಿದರು.

ಕ್ರಿಯಾ ಯೋಜನೆಯಡಿ ಪ್ರತಿ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಸುಮಾರು ₹25 ಲಕ್ಷ ಅನುದಾನ ನೀಡಲಾಗುತ್ತಿದ್ದು, ಅದರಡಿ ವಿವಿಧ ಸಂಘ–ಸಂಸ್ಥೆಗಳು ನೀಡುವ ಪ್ರಸ್ತಾವಗಳನ್ನು ಅನುಷ್ಠಾನಗೊಳಿಸಲು ಬಳಸಿಕೊಳ್ಳಬಹುದಾಗಿದೆ ಎಂದು ಆಯುಕ್ತರು ತಿಳಿಸಿದರು. ಎಲ್ಲ ವಿಭಾಗಗಳು ಕಾರ್ಯಯೋಜನೆಗಳನ್ನು ಆದ್ಯತೆ ಮೇಲೆ ಸಿದ್ಧಪಡಿಸಿ, ಡಿಸೆಂಬರ್ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪ್ರಗತಿ ಪರಿಶೀಲನೆ ಹಾಗೂ ಅಗತ್ಯ ಕ್ರಮಗಳಿಗಾಗಿ ಪ್ರತಿ ತಿಂಗಳು ಸಮೀಕ್ಷಾ ಸಭೆ ನಡೆಸುವುದಾಗಿ ಹೇಳಿದರು.

10 ದಿನದಲ್ಲಿ ಕ್ರಮ: ಪುಟ್ಟೇನಹಳ್ಳಿ ಕೆರೆ ಸಮೀಪ ನೀರು ನಿಲ್ಲದಂತೆ ಕ್ರಮ ಕೈಗೊಂಡು, ಕೊಳಚೆ ನೀರು ತಿರುವು ಕಾಮಗಾರಿಯನ್ನು ಹತ್ತು ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಪೊಮ್ಮಲ ಸುನೀಲ್ ಕುಮಾರ್ ಸೂಚಿಸಿದರು.

ಪುಟ್ಟೇನಹಳ್ಳಿ ಕೆರೆ ಸಮೀಪದ ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್ಸ್ ಹಾಗೂ ಎಸ್ಟೀಮ್ ನಾರ್ತ್ ವುಡ್ ಅಪಾರ್ಟ್ಮೆಂಟ್ ಪ್ರದೇಶಗಳಲ್ಲಿ ಬುಧವಾರ ಪರಿಶೀಲನೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-4-156639142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.