ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಎಲೆಕ್ಟ್ರಾನಿಕ್‌ ವಸ್ತು ಖರೀದಿಸಿ ₹1.45 ಕೋಟಿ ವಂಚನೆ

Published 16 ಆಗಸ್ಟ್ 2024, 0:20 IST
Last Updated 16 ಆಗಸ್ಟ್ 2024, 0:20 IST
ಅಕ್ಷರ ಗಾತ್ರ

ಬೆಂಗಳೂರು: ಲ್ಯಾಪ್ಟೆಕ್‌ ಟ್ರೇಡರ್ಸ್‌ ಎಫ್‌ಜೆಡ್‌ ಕಂಪನಿಯಿಂದ ₹1.45 ಕೋಟಿ ಮೌಲ್ಯದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಿ, ಹಣ ನೀಡದೇ ವಂಚಿಸಲಾಗಿದೆ. 

ಕಂಪನಿಯ ಅಶ್ವಿನಿ ರೈ ಅವರು ಎಂಬುವವರು ಸೈಬರೋನಿಕ್‌ ಕಂಪನಿಯ ಕೇರಳ ಮೂಲದ ಕಿರಣ್‌ ಸೆಲ್ಟೋನ್‌ ಎನ್ನುವವರ ವಿರುದ್ಧ ಸಿಸಿಬಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

‘ಆರೋಪಿ ಕಿರಣ್‌ ಕಂಪನಿಗೆ ಬಂದು ದುಬೈನ ಮ್ಯಾಕ್ಸ್‌ಕ್ಲೋವ್‌ ಟೆಕ್ನಾಲಜೀಸ್‌ ಎಲ್‌ಎಲ್‌ಸಿ ಎಂಬ ಕಂಪನಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಪೂರೈಸಲು ದರಪಟ್ಟಿ (ಕೋಟೇಷನ್‌) ನೀಡಿದ್ದರು. ದುಬೈನಲ್ಲಿರುವ ನಮ್ಮ ಕಂಪನಿಯ ಶಾಖೆಯ ಸಿಬ್ಬಂದಿ ಮ್ಯಾಕ್ಸ್‌ಕ್ಲೋವ್‌ ಕಂಪನಿಯ ಬಗ್ಗೆ ವಿಚಾರಣೆ ನಡೆಸಿದ್ದರು’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಆರೋಪಿ ಕಿರಣ್‌ನಿಂದ ಐದು ಖರೀದಿ ಆದೇಶ (ಪ‍ರ್ಚೇಸಿಂಗ್‌ ಆರ್ಡರ್‌) ಪ‍ಡೆದು ದುಬೈನ ಲ್ಯಾಪ್ಟೆಕ್‌ ಟ್ರೇಡರ್ಸ್‌ ಎಫ್‌ಜೆಡ್‌ ಶಾಖೆ ಹಾಗೂ ಎಲೆಕ್ಟ್ರಾನಿಕ್‌ ಬಜಾರ್‌ ಎಫ್‌ಜೆಡ್‌ ಕಂಪನಿಗಳ ಮೂಲಕ  ₹1.45 ಕೋಟಿ ಮೌಲ್ಯದ ವಸ್ತುಗಳನ್ನು ಆರೋಪಿ ಸೂಚಿಸಿದ ಕಂಪನಿಗೆ ಪೂರೈಸಲಾಗಿತ್ತು. ಆರೋಪಿ ನೀಡಿದ್ದ ₹1.45 ಕೋಟಿ ಮೊತ್ತದ ಚೆಕ್‌ ತಿರಸ್ಕೃತಗೊಂಡಿವೆ’ ಎಂಬ ದೂರಿನಲ್ಲಿ ತಿಳಿಸಿದ್ದಾರೆ.  

‘ಈ ಬಗ್ಗೆ ವಿಚಾರಿಸಲು ಆರೋಪಿ ಕಿರಣ್‌ ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿರುತ್ತಾನೆ. ದುಬೈನಲ್ಲಿರುವ ಅವರ ಕಂಪನಿಯ ಉಗ್ರಾಣಕ್ಕೆ ಭೇಟಿ ನೀಡಿದರೆ, ಅಲ್ಲಿಂದ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಿರುವುದು ತಿಳಿದು ಬಂದಿದೆ. ಅಲ್ಲಿನ ಸಿಬ್ಬಂದಿ ಕೂಡಾ ಕಿರಣ್‌ನಿಂದ ನಾವು ವಂಚನೆ ಒಳಗಾಗಿದ್ದೇವೆ ಎಂದಿದ್ದಾರೆ‘ ಎಂದು ಅಶ್ವಿನಿ ರೈ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT