ಬೆಂಗಳೂರು: ವೇಗವಾಗಿ ಬೆಳೆಯುತ್ತಿ ರುವ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರ ಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಆಳವಾಗಿ ಬೇರೂರಿದ್ದು, ಭಸ್ಮಾಸುರನಂತೆ ಮಾನವ ಕುಲಕ್ಕೆ ಮಾರಕವಾಗಬಾರದು’ ಎಂದು ಸಿಎಸ್ಆರ್ ಫೋರ್ತ್ ಪ್ಯಾರಡೈಮ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಗೋಪಾಲ ಕೃಷ್ಣ ಪಾತ್ರ ಹೇಳಿದರು.

ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ಗಾರ್ಡನ್ ಸಿಟಿ ವಿಶ್ವ ವಿದ್ಯಾಲಯದಲ್ಲಿ ಡಾ.ಎ.ಪಿ.ಜಿ. ಅಬ್ದುಲ್ಕಲಾಂ ಎಂಜಿನಿಯರಿಂಗ್ ಶಾಲೆಯು ಹಮ್ಮಿಕೊಂಡಿದ್ದ ‘ವಿಜ್ಞಾನ–35’ ಉಪನ್ಯಾಸದಲ್ಲಿ ಮಾತನಾಡಿದರು.

‘ಜೀವನದಲ್ಲಿ ಎ.ಐ ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಿದೆ. ಎಂಜಿನಿಯರ್ಗಳು, ಸಂಶೋಧಕರು ವಿಮರ್ಶಾತ್ಮಕ ಚಿಂತನೆ, ಹೊಣೆಗಾರಿಕೆ, ನಾವೀಣ್ಯತೆ ಮತ್ತುಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವ ಗುಣಬೆಳೆಸಿಕೊಳ್ಳಬೇಕು.ಭಾರತ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ತುರ್ತು ಪರಿಹರಿಸುವ ತಂತ್ರಗಾರಿಕೆ ಕೊರತೆ ಕುರಿತು ಗಮನ ಹರಿಸಬೇಕು’ ಎಂದರು.

ಕುಲಪತಿ ರಾಮಚಂದ್ರ ಗೌಡ, ಕುಲಸಚಿವರಾದ ಶೀಜಾ, ಶೈಕ್ಷಣಿಕ ವ್ಯವಹಾರ ಗಳ ಡೀನ್ ಬಿಜು ಧರ್ಮಪಾಲನ್, ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಸಂಯೋಜಕಿ ಎಸ್.ಯಶೋದಮ್ಮ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-4-1232796338

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.