ಶನಿವಾರ, ಫೆಬ್ರವರಿ 27, 2021
19 °C

ವಿಮಾನದ ಸೀಟಿನ ಕೆಳಗೆ ಚಿನ್ನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೊ ವಿಮಾನದ ಸೀಟಿನ ಕೆಳಗೆ ₹12.68 ಲಕ್ಷ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ಕೊಲಂಬೊದಿಂದ ಬುಧವಾರ ನಿಲ್ದಾಣಕ್ಕೆ ಬಂದಿದ್ದ ವಿಮಾನದಲ್ಲಿ ಚಿನ್ನವಿರುವ ಬಗ್ಗೆ ಮಾಹಿತಿ ಪಡೆದು, ತಪಾಸಣೆ ನಡೆಸಲಾಯಿತು. ಸೀಟಿನ ಕೆಳಗಿನ ಕೊಳವೆಯೊಳಗೆ ಚಿನ್ನದ ಗಟ್ಟಿಗಳು ಸಿಕ್ಕವು. ಆದರೆ, ಅವುಗಳನ್ನು ಯಾರು ಬಚ್ಚಿಟ್ಟಿದ್ದರು ಎಂಬುದು ಗೊತ್ತಾಗಿಲ್ಲ’ ಎಂದು ಕಸ್ಟಮ್ಸ್ ಹೆಚ್ಚುವರಿ ಆಯುಕ್ತ ಹರ್ಷ ಉಮ್ರೆ ಹೇಳಿದರು.

ಇನ್ನೊಂದು ಪ್ರಕರಣದಲ್ಲಿ, ₹11.57 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕೊಡಗಿನ ಕೊಟ್ಟಂಬಾಡಿ ಅಹ್ಮದ್ ಎಂಬುವರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಹ್ರೇನ್‌ನಿಂದ ಗಲ್ಫ್‌ ಏರ್‌ಲೈನ್ಸ್ ವಿಮಾನದಲ್ಲಿ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ ಅವರನ್ನು ಲೋಹ ಶೋಧಕ ಯಂತ್ರದಲ್ಲಿ ತಪಾಸಣೆ ನಡೆಸಿದಾಗ ಚಿನ್ನದ ಸುಳಿವು ಸಿಕ್ಕಿತು. ಧರಿಸಿದ್ದ ಬಟ್ಟೆಯಲ್ಲೇ ಚಿನ್ನದ ಆಭರಣಗಳನ್ನು ಬಚ್ಚಿಟ್ಟುಕೊಂಡಿದ್ದರು. ಅದಕ್ಕೆ ಅವರು ಯಾವುದೇ ದಾಖಲೆ ನೀಡಿಲ್ಲ ಎಂದು ಹರ್ಷ ತಿಳಿಸಿದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು