ಬೆಂಗಳೂರು: ಸಂವಿಧಾನ ತಜ್ಞ, ಸಂವಿಧಾನದ ಮೂಲಕ ಸಮಾನತೆಯ ಶಕ್ತಿ ತುಂಬಿದ ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ನಗರದ ವಿವಿಧೆಡೆ ಮಂಗಳವಾರ ಆಚರಿಸಲಾಯಿತು.

ರಾಜಕೀಯ ಪಕ್ಷಗಳ ಕಚೇರಿ, ವಿಶ್ವವಿದ್ಯಾಲಯ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಜಯಂತಿಯಲ್ಲಿ ಅಂಬೇಡ್ಕರ್ ಅವರ ವಿಚಾರ, ಸಮಾಜದ ಸದ್ಯದ ಸನ್ನಿವೇಶದ ಕುರಿತು ಚರ್ಚೆಗಳು ನಡೆದವು.

‘ಕೆಲವರು ಕಾಲಕ್ಕೆ ಸೀಮಿತವಾದ ನಾಯಕರಾದರೆ ಅಂಬೇಡ್ಕರ್ ಅವರು ಕಾಲಾತೀತ ನಾಯಕ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬುದ್ಧನ ಪ್ರೇರಣೆ, ಬಸವಣ್ಣನ ಸಮಾನತೆ ಇವೆರಡನ್ನೂ ಪಡೆದ ಅಂಬೇಡ್ಕರ್ ಭಾರತಕ್ಕೆ ಸಮಾನತೆ, ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿರುವ ಶ್ರೇಷ್ಠ ವ್ಯಕ್ತಿ’ ಎಂದರು.

ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲ ವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಸಿಮೆಂಟ್ ಮಂಜುನಾಥ್ ಉಪಸ್ಥಿತರಿದ್ದರು.

‘ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಬೇಕು’

‘21ನೇ ಶತಮಾನದಲ್ಲೂ ಭಾರತದಲ್ಲಿ ಜಾತಿ ಕ್ರೌರ್ಯ, ಮೇಲು- ಕೀಳು, ಭೇದ- ಭಾವ ಹಾಸು ಹೊಕ್ಕಾಗಿದೆ. ಜಾತಿ ವಿನಾಶದ ಕುರಿತು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಬೇಕು’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.

ಜ್ಞಾನಭಾರತಿ ಆವರಣದಲ್ಲಿ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕೂತಿವೆ. ದೇಶದಲ್ಲಿ ಅಲಿಖಿತ ಸಂವಿಧಾನ ಜಾರಿಯಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಚಿಂತಕ ಬಂಜಗೆರೆ ಜಯಪ್ರಕಾಶ್, ಕುಲಪತಿ ಡಾ.ಎಸ್.ಎಂ.ಜಯಕರ, ಕುಲಸಚಿವರಾದ ಕೆ.ಟಿ.ಶಾಂತಲಾ, ಸಿ.ಎಸ್.ಕರಿಗಾರ್ ಉಪಸ್ಥಿತರಿದ್ದರು.

‘ಅಂಬೇಡ್ಕರ್ ಅವರ ಬಹುಶಿಸ್ತೀಯ ಚಿಂತನಶೀಲ ಬರವಣಿಗೆಗಳ ಕುರಿತು ವಿದ್ಯಾರ್ಥಿಗಳು ಗಂಭೀರ ಅಧ್ಯಯನ ಮಾಡಬೇಕು’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ಕೆ.ವಿದ್ಯಾಕುಮಾರಿ ತಿಳಿಸಿದರು.

ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬಂದಿದ್ದ ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಅವರು ಅಂಬೇಡ್ಕರ್ ಅವರ ಜೀವನ ವೃತ್ತಾಂತ ಕುರಿತ ಜನಕಥಾ ಕೀರ್ತನೆ ಪ್ರಸ್ತುತಪಡಿಸಿದರು. ಕುಲಪತಿ ಬಿ.ರಮೇಶ್, ಕುಲಸಚಿವರಾದ ಎ.ನವೀನ್ ಜೋಸೆಫ್, ರಮೇಶ.ಬಿ.ಕುಡೇನಟ್ಟಿ, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಕೆ.ಆರ್.ಜಲಜಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-4-391269791

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.