ಬೆಂಗಳೂರು: ದಕ್ಷಿಣ ನಗರ ಪಾಲಿಕೆ, ಜಯನಗರ ಕ್ಯಾನೈನ್ ಸ್ಕ್ವಾಡ್ ಮತ್ತು ಶಿವಶಕ್ತಿ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ ‘ಉಚಿತ ಶ್ವಾನ ದತ್ತು ಸ್ವೀಕಾರ ಮತ್ತು ಲಸಿಕಾ ಶಿಬಿರ’ದಲ್ಲಿ 10 ನಾಯಿಮರಿಗಳು ಮತ್ತು ಒಂದು ಬೆಕ್ಕಿನ ಮರಿ ಹೊಸ ಮನೆ ಕಂಡುಕೊಂಡವು.

ದತ್ತು ಪ್ರಕ್ರಿಯೆಯ ಜೊತೆಗೆ ಶ್ವಾನಗಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಲಸಿಕಾ ಕಾರ್ಯಕ್ರಮದಲ್ಲಿ 20 ಶ್ವಾನಗಳಿಗೆ ಕಂಬೈನ್ಡ್ ವ್ಯಾಕ್ಸಿನ್ ನೀಡಲಾಯಿತು. ರೇಬೀಸ್ ರೋಗ ನಿಯಂತ್ರಣಕ್ಕಾಗಿ 30 ಶ್ವಾನಗಳಿಗೆ ಆಂಟಿ-ರೇಬಿಸ್ ಲಸಿಕೆ ಹಾಕಲಾಯಿತು.

‘ಬೀದಿ ಬದಿಯ ಮತ್ತು ಆಶ್ರಯ ರಹಿತ ಪ್ರಾಣಿಗಳಿಗೆ ಸುರಕ್ಷಿತ ಆಸರೆ ಕಲ್ಪಿಸುವುದು ಹಾಗೂ ಶ್ವಾನಗಳ ಆರೋಗ್ಯ ಕಾಪಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಪಾಲಿಕೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಶ್ರೀನಾಥ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-4-2005786517

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.